ಮೈಸೂರು

ಪಿಎಫ್ ಐ ,ಕೆಎಫ್ ಡಿ ಸಂಘಟನೆಗಳನ್ನ ಶೀಘ್ರ ನಿಷೇಧಿಸಿ : ರಾಘವೇಂದ್ರ ಒತ್ತಾಯ

ಮೈಸೂರು,ಆ.30;- ಜಿಲ್ಲಾ ಬಿ.ಜೆ‌.ಪಿ ಯುವಮೋರ್ಚಾ ವತಿಯಿಂದ ಬುಧವಾರ ಮೈಸೂರಿನ ಬಿ.ಜೆ.ಪಿ ಕಛೇರಿಯಲ್ಲಿ ಕಾರ್ಯಕಾರಿಣಿ ಸಭೆ ಜರುಗಿತು.

ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಮೈಸೂರು ವಿಭಾಗದ ಚಲೋ ಮಂಗಳೂರು ಬೈಕ್ ರ್ಯಾಲಿಯ ಪ್ರಮುಖ್ ಆದಂತಹ ರಾಘವೇಂದ್ರ ಮಾತನಾಡಿ ರಾಜ್ಯ ಸರಕಾರವು ಜನಪರವಾದಂತಹ ಕೆಲಸ ಮಾಡುವಲ್ಲಿ ವಿಫಲವಾಗಿದೆ. ರೈತರು,ಪೋಲೀಸ್ ಇಲಾಖೆಯವರು,ಆರ್.ಎಸ್.ಎಸ್ ದೇಶಭಕ್ತ ಕಾರ್ಯಕರ್ತರು  ಸರಕಾರದ ಈ ಅವಧಿಯಲ್ಲಿ ಕೊಲೆ ಹಾಗೂ ಆತ್ಮಹತ್ಯೆಯಂತಹ ಹೀನ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ.  ಇತ್ತೀಚಿಗೆ ನಡೆದ ಆರ್.ಎಸ್.ಎಸ್ ಹೋರಾಟಗಾರ ಶರತ್ ಮಡಿವಾಳ್ ಹತ್ಯೆಯಲ್ಲಿ ಚಾಮರಾಜನಗರದ ಪಿಎಫ್ ಐ ಅಧ್ಯಕ್ಷ ಜಲೀಲ್ ವುಲ್ಲಾ ಹಾಗೂ ಈ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದು ಈತನಿಗೆ ಹಾಗೂ ಈ ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸೂಕ್ತ ಶಿಕ್ಷೆ ಒದಗಿಸಬೇಕು. ಪಿಎಫ್ ಐ ,ಕೆಎಫ್ ಡಿ  ಸಂಘಟನೆಗಳನ್ನ ಶೀಘ್ರ ನಿಷೇಧಿಸಬೇಕೆಂದು ಆಗ್ರಹಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿ ಸೆ. 6ನೇ ತಾರೀಖಿನಂದು ಚಲೋ ಮಂಗಳೂರು ಎಂಬ ಆಪರೇಷನ್ ಮೂಲಕ ರಾಜ್ಯದ ಲಕ್ಷಾಂತರ ಯುವಮಿತ್ರರು ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ ಎಂದರು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಮಾತನಾಡಿ ರಾಜ್ಯ ಸರಕಾರದ ಧೋರಣೆಗಳನ್ನ ಖಂಡಿಸಿದರು. ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಸ್ ಡಿಪಿಐ, ಕೆಎಫ್ ಡಿ, ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದರಲ್ಲದೇ,ಈ  ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ್ ರೈ ಕೂಡಲೇ ರಾಜೀನಾಮೆ ನೀಡಿ ಪ್ರಜಾಪ್ರಭುತ್ವದ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ  ಜಿಲ್ಲಾ ಬಿ‌.ಜೆ.ಪಿ ಉಪಾಧ್ಯಕ್ಷ ಎಸ್.ಸಿ ಅಶೋಕ್ , ಜಿಲ್ಲಾ ಬಿ‌ಜೆ.ಪಿ ಪ್ರಮುಖ ವಿಭಾಗದ ಪ್ರಧಾನಕಾರ್ಯದರ್ಶಿ ಮಾರ್ಬಳ್ಳಿ ಹೇಮಂತ್ ಕುಮಾರ್ ಪರಿಷಿತ್ ರಾಯ್  ಅರಸ್ ,ಜಿಲ್ಲಾ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ವಿಜಯ್ ಕುಮಾರ್ ಹಾಗೂ ಗೊರೂರು ಶಿವು,ಜಿಲ್ಲಾ ಯುವಮೋರ್ಚಾ ಪದಾಧಿಕಾರಿಗಳು ಎಲ್ಲಾ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ಮುಖಂಡರೂ ಸಹ ಸಭೆಯಲ್ಲಿ ಉಪಸ್ಥಿತರಿದ್ದರು.       (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: