ಕರ್ನಾಟಕ

ಚೆಸ್ಕಾಂ ಅಧಿಕಾರಿಗಳಿಗೆ ಬರುವ ಎಲ್ಲಾ ದೂರವಾಣಿ ಕರೆಗಳನ್ನು ಸ್ವೀಕರಿಸಿ ಜನರ ಕುಂದು ಕೊರತೆಯನ್ನು ಆಲಿಸಿ, ಸಮಸ್ಯೆ ಪರಿಹರಿಸಿ : ಕೆ.ರಾಮಚಂದ್ರ ಸೂಚನೆ

ರಾಜ್ಯ(ಚಾಮರಾಜನಗರ)ಆ.30: – ಚೆಸ್ಕಾಂ ಅಧಿಕಾರಿಗಳಿಗೆ ಬರುವ ಎಲ್ಲಾ ದೂರವಾಣಿ ಕರೆಗಳನ್ನು ಸ್ವೀಕರಿಸಿ ಜನರ ಕುಂದು ಕೊರತೆಯನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಕೆ.ರಾಮಚಂದ್ರ ಸೂಚಿಸಿದರು.

ಕೊಳ್ಳೇಗಾಲ ಪಟ್ಟಣದ ಉಪವಿಭಾಗ ಕಛೇರಿ ವಿದ್ಯುತ್ ಸರಬರಾಜು ನಿಗಮದ ಕಛೇರಿ ಆವರಣದಲ್ಲಿ ಎರಡನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಜನರು ಎಷ್ಟೇ ಹೋತ್ತಿನಲ್ಲಿ ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ದೂರವಾಣಿ ಕರೆ ಮಾಡಿದ ಸಂಧರ್ಭದಲ್ಲಿ ಅಧಿಕಾರಿಗಳು ಕರೆಯನ್ನು ಸ್ವೀಕರಿಸಿ ಅವರ ಸಮಸ್ಯೆಗಳ ಆಲಿಸದೇ ನನಗೆ ದೂರು ನೀಡಿದಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕಳೆದ ಸಭೆಯಲ್ಲಿ ಸುಮಾರು 16 ದೂರು ದಾಖಲಾಗಿತ್ತು. ಅದರಲ್ಲಿ 13 ಪ್ರಕರಣಗಳು ಬಗೆಹರಿದಿದೆ ಇನ್ನೂ ಮೂರು ದೂರುಗಳು ಬಾಕಿ ಇದೆ. ಅದನ್ನೂ ಸಹಾ ಶೀಘ್ರದಲ್ಲಿ ಬಗೆಹರಿಸುವಂತೆ ಸೂಚನೆ ನೀಡಿದರು.

ಇಂದಿನ ಸಂಪರ್ಕ ಸಭೆಗೆ ಸರಿಯಾದ ಮಾಹಿತಿ ಇಲ್ಲದೇ ಜನರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ವಾರಕ್ಕೂ ಮೊದಲು ಸಭೆಯ ಮಾಹಿತಿಯನ್ನು ಜನರಿಗೆ ತಿಳಿಸಬೇಕು ಕಛೇರಿಗೆ ಬರುವ ಜನರಿಗೆ ಮಾಹಿತಿಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಹಿಂದೆ ಕೊಳ್ಳೇಗಾಲ ಶಾಖಾ ಕಛೇರಿ ಮೆಸ್ಕಾಂ ಇದ್ದ ಸಂಧರ್ಭದಲ್ಲಿ ಮೋದಲ ಸ್ಥಾನದಲ್ಲಿತ್ತು. ಚೆಸ್ಕಾಂ ಆಗಿ ಬದಲಾವಣೆಯಾದ ಬಳಿಕ ಬಹಳಷ್ಟು ಹಿಂದೆ ಉಳಿದಿದೆ. ಆದ್ದರಿಂದ ಪ್ರತಿಯೊಬ್ಬ ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸುವ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಗುತ್ತಿಗೆದಾರರು ಮಾತನಾಡಿ, ಉಪವಿಭಾಗ ಕಛೇರಿಯಲ್ಲಿ ಇರುವ ಸಾಮಾಗ್ರಿಗಳನ್ನು ಸಾಗಿಸುವ 4 ಲಾರಿಗಳು ಸಹಾ ಕೆಟ್ಟು ನಿಂತಿದೆ ಅದನ್ನು ದುರಸ್ತಿಪಡಿಸಿ, ವರ್ಷಕೊಮ್ಮೆ ವಿದ್ಯುತ್ ಬಿಲ್‍ಗಳು ಬರುತ್ತಿರುವ ಬಗ್ಗೆ ಗಮನಹರಿಸಿ, ತಾಲ್ಲೂಕಿನ ಇತ್ತಲದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಸಿ ಹಾಗೂ ಕಛೇರಿಯಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಇನ್ನೀತರ ಸಮಸ್ಯೆಗಳನ್ನು ಬಗೆಹರಿಸಿಕೊಡುವಂತೆ ಅಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ಕಾರ್ಯಪಾಲಕ ಇಂಜಿನಿಯರ್ ತಾರಾ, ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ಎಸ್.ಲಿಂಗರಾಜು, ಲೆಕ್ಕಾಧಿಕಾರಿ ವಿಜಯ್‍ಕುಮಾರ್, ಸಹಾಯಕ ಇಂಜಿನಿಯರ್ ಎಲ್.ದೊರೆಸ್ವಾಮಿ, ಲಕ್ಷ್ಮೀಕಾಂತ್, ಅಧಿಕಾರಿಗಳಾದ ಫಣೀಶ್‍ಬಾಬು, ರಂಗೇಗೌಡ, ಜಮೀಲ್ ಅಹಮದ್, ಮಹಾದೇವಸ್ವಾಮಿ, ಗುತ್ತಿಗೆದಾರರಾದ ರವಿನಾಯರ್, ಸರದಾರ್ ಷರೀಫ್, ಕೃಷ್ಣ ಯಳಂದೂರು, ತಸ್ಕೀನ್ ಅಹಮದ್ ಹಾಘೂ ಇನ್ನೀತರರು ಹಾಜರಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: