ಮೈಸೂರು

ಎಸ್‍ಬಿಎಂನಿಂದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ

ಸ್ಟೇಟ್‍ ಬ್ಯಾಂಕ್ ಆಫ್ ಮೈಸೂರು ಇತ್ತೀಚಿಗೆ ಸಿದ್ದರಾಮಯ್ಯನಹುಂಡಿ ಗ್ರಾಮದಲ್ಲಿ ‘ಆರ್ಥಿಕ ಸಾಕ್ಷರತೆ ಕಾರ್ಯಕ್ರಮ’ ನಡೆಸಿತು.

ಜನಧನ ಯೋಜನೆ ಮತ್ತು ಸರಕಾರದ ಇತರ ಸಾಮಾಜಿಕ ಭದ್ರತಾ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು. ಬ್ಯಾಂಕ್‍ ಖಾತೆಗೆ ಆಧಾರ್ ನಂಬರ್‍ ಸೇರಿಸುವ ಅವಶ್ಯಕತೆ ಬಗ್ಗೆ ಜನರಿಗೆ ಅರಿವು ಮೂಡಿಸಿ ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಸರಕಾರವು ಬ್ಯಾಂಕ್ ಮೂಲಕ ನೀಡುವ ಸಾಲ ಸೌಲಭ್ಯಗಳಾದ ಪಶುಭಾಗ್ಯ, ಕುರಿ ಮತ್ತು ಆಡು ಸಾಕಣೆ, ಹಸು ಸಾಕಣೆ ಬಗ್ಗೆ ಮಾಹಿತಿ ನೀಡಿದರು.

ನಬಾರ್ಡ್‍ ಎಜಿಎಮ್ ಅರವಮುದನ್, ಎಸ್‍ಬಿಎಂ ಆರ್ಥಿಕ ಸಾಕ್ಷರತೆ ಕೌನ್ಸಿಲರ್ ಕೆ.ವಿ. ರಮನಾಥ್, ರುಡ್‍ಸೆಟ್ ಬೋಧಕ ರವೀಂದ್ರನ್, ಯಡಕೋಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸವಿತಾ, ಅಭಿವೃದ್ಧಿ ಅಧಿಕಾರಿ ಕಿರಣ್‍ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Leave a Reply

comments

Related Articles

error: