ಕ್ರೀಡೆಮೈಸೂರು

ಟೆರೆಷಿಯನ್ ಕಾಲೇಜು ವಿದ್ಯಾರ್ಥಿನಿಯರಿಂದ ದಾಖಲೆ ನಿರ್ಮಾಣ

ಮೈಸೂರಿನ ಟೆರೆಷಿಯನ್ ಕಾಲೇಜಿನ ವಿದ್ಯಾರ್ಥಿನಿಯರು ಮೈಸೂರು ವಿವಿಯ 88ನೇ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ದಾಖಲೆ ನಿರ್ಮಿಸಿದ್ದಾರೆ.

800ಮೀಟರ್ ಓಟ, 100ಮೀಟರ್ ಹರ್ಡಲ್ಸ್, ಮತ್ತು ಹ್ಯಾಮರ್ ಥ್ರೋದಲ್ಲಿ ದಾಖಲೆ ನಿರ್ಮಿಸಿದೆ. ಟೆರೆಷಿಯನ್ ಕಾಲೇಜಿನ ಪ್ರಿಯಾಂಕಾ ವಿ. 2:13:68 ಸೆಕೆಂಡುಗಳಲ್ಲಿ 800 ಮೀಟರ್ ಓಟ ನಡೆಸಿ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮೇಘನಾ ಕೆ.ಆರ್.ಅವರ ದಾಖಲೆಯನ್ನು ಮುರಿದಿದ್ದಾರೆ. ಅವರು 2013-14ರಲ್ಲಿ ನಡೆದ ಕ್ರೀಡಾಕೂಟದಲ್ಲಿ 2:18:78 ಸೆಕೆಂಡುಗಳನ್ನು ತೆಗೆದುಕೊಂಡಿದ್ದರು.

ಹ್ಯಾಮರ್ ಥ್ರೋದಲ್ಲಿ  ಟೆರೆಶಿಯನ್ ಕಾಲೇಜಿನ ಪುಷ್ಪಾ ಗಡ್ಡಿ ಅವರ ದಾಖಲೆಯನ್ನು ಹರ್ಷಿತಾ.ಡಬ್ಲ್ಯು.ಆರ್ 42.30ಅಂತರದಲ್ಲಿ ಮುರಿದು ದಾಖಲೆ ನಿರ್ಮಿಸಿದ್ದಾರೆ.

100ಮೀಟರ್ ಹರ್ಡಲ್ಸ್ ನಲ್ಲಿ ಪ್ರಿಯಾಂಕಾ ಎಸ್.ಜಿ. 15.11ಸೆಕೆಂಡುಗಳಲ್ಲಿ ತಲುಪಿ 1981-82ರಲ್ಲಿ ರೀತ್ ದೇವಯ್ಯ ನಿರ್ಮಿಸಿದ ದಾಖಲೆಯನ್ನು ಮುರಿದಿದ್ದಾರೆ.

Leave a Reply

comments

Related Articles

error: