ಮೈಸೂರು

ಯುವ ಜನತೆಯಲ್ಲಿನ ಪ್ರತಿಭೆ ಹೊರ ತರಲು ಸಾಂಸ್ಕೃತಿಕ ಮೇಳಗಳು ಅಗತ್ಯ : ಶಾಸಕ ವಾಸು ಅಭಿಮತ

ಮೈಸೂರು,ಆ.30:- ಯುವ ಜನತೆಯಲ್ಲಿನ  ಪ್ರತಿಭೆ ಹೊರ ತರಲು ಸಾಂಸ್ಕೃತಿಕ ಮೇಳಗಳು ಅಗತ್ಯ ಎಂದು ಶಾಸಕ ವಾಸು ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದಲ್ಲಿ ಬುಧವಾರ ವಿಶ್ವ ಮಾನವ ವಿದ್ಯಾರ್ಥಿ ಯುವ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬರಲು ಯುವಶಕ್ತಿಯ ಪಾತ್ರದೊಡ್ಡದಿದೆ. ಇಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ನೂರಾರು ಯುವಕರು ಸೇರಿದ್ದೀರಿ. ಇಲ್ಲಿ ನಿಮ್ಮ ಪ್ರತಿಭೆಗಳಿಗೆ ಸಾಕಷ್ಟು ಅವಕಾಶವಿದ್ದು, ನಿಮ್ಮ ಪ್ರತಿಭೆಗಳನ್ನು ಇಲ್ಲಿ ವ್ಯಕ್ತಪಡಿಸಿಕೊಳ್ಳಿ ಎಂದರು.  ಕುವೆಂಪು ಅವರು ಯಾವ ಜಾತಿ ಧರ್ಮಕ್ಕೆ ಸೇರಿದವರಲ್ಲ ಅವರೊಬ್ಬ ವಿಶ್ವಮಾನವ. ಈ ಬಾರಿ ನಮ್ಮ ಸರ್ಕಾರ  ನಿಸಾರ್ ಅಹಮ್ಮದ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲಿದ್ದು, ಆ  ಮೂಲಕ ಕುವೆಂಪು ಅವರ ವಿಶ್ವಮಾನವ ನೀತಿಯನ್ನು ಪಾಲಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಸಿ.ನಾಗಣ್ಣ ಅವರಿಗೆ ರಾಜ್ಯಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯ್ತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸದಾಶಿವ ಹುಲ್ಗೂರ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಎಂ. ತಳವಾರ್, ವಿಶ್ವಮಾನವ ವಿದ್ಯಾರ್ಥಿಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೌಡ, ರಾಜ್ಯ ಕಾರ್ಯಾಧ್ಯಕ್ಷ ವಿ.ವಿ.ವೈ.ವಿ ಯ ರಾಕೇಶ್ ಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬೆಳಗಾಂ, ಗುಲ್ಬರ್ಗ, ರಾಯಚೂರು, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧ ಕಾಲೇಜುಗಳ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: