ಮೈಸೂರು

ಕಡ್ಡಾಯವಾಗಿ ಎಲ್‍ಪಿಜಿ ಸಂಪರ್ಕ ಪಡೆಯಿರಿ: ಜಿಲ್ಲಾಧಿಕಾರಿ

ಮೈಸೂರು ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿರುವ ಪಡಿತರ ಚೀಟಿದಾರರು ಅ.25ರೊಳಗೆ ಕಡ್ಡಾಯವಾಗಿ ಎಲ್‍ಪಿಜಿ ಸಂಪರ್ಕ ಪಡೆಯುವಂತೆ ಜಿಲ್ಲಾಧಿಕಾರಿ ರಂದೀಪ್‍ ಸೂಚಿಸಿದ್ದಾರೆ.

ಮೈಸೂರು ಜಿಲ್ಲೆಯ ಮೈಸೂರು ನಗರ, ನಂಜನಗೂಡು, ಟಿ.ನರಸೀಪುರ, ಬನ್ನೂರು, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್‍.ಡಿ.ಕೋಟೆ ಹಾಗೂ ಸರಗೂರು ಪಟ್ಟಣ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಈ ಎಲ್‍ಪಿಜಿ ಸಂಪರ್ಕ ಪಡೆಯುವಂತೆ ಹೇಳಲಾಗಿದೆ. ಎಲ್‍ಪಿಜಿ ವಿತರಕರು ಎಲ್‍ಪಿಜಿ ಸಂಪರ್ಕ ನೀಡಲು ಯಾರಾದರೂ ತೊಂದರೆ ಮಾಡಿದ್ದಲ್ಲಿ ತಾಲೂಕಿನ ಆಹಾರ ಶಿರಸ್ತೇದಾರರು/ ಆಹಾರ ನಿರೀಕ್ಷಕರು ಅಥವಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಉಪ ನಿರ್ದೇಶಕರಾದ ಡಾ.ಕೆ.ರಾಮೇಶ್ವರಪ್ಪ -9611165367 ಅಥವಾ ಸಹಾಯವಾಣಿ- 1967 ಅನ್ನು ಸಂಪರ್ಕಿಸಲು ಕೋರಲಾಗಿದೆ.

ಪಡಿತರ ಚೀಟಿದಾರರು ಎಲ್‍ಪಿಜಿ ಸಂಪರ್ಕ ಹೊಂದಿದ್ದು, ಆ ಮಾಹಿತಿಯನ್ನು ಬಹಿರಂಗಪಡಿಸದೆ ಸೀಮೆಎಣ್ಣೆ ಪಡೆಯದೆ ಎಲ್‍ಪಿಜಿ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗೆ ಅಥವಾ ಸಂಬಂಧಪಟ್ಟ ಆಹಾರ ನಿರೀಕ್ಷಕರಿಗೆ ಅ.25ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

comments

Related Articles

error: