ಸುದ್ದಿ ಸಂಕ್ಷಿಪ್ತ

ಸೋಮವಾರಪೇಟೆ-ಕೊಡ್ಲಿಪೇಟೆ ಮುಖ್ಯರಸ್ತೆಯ ಬದಿಗಳಲ್ಲಿ ಬೆಳೆದಿರುವ ಕುರುಚಲು ಗಿಡ ತೆರವುಗೊಳಿಸಲು ಆಗ್ರಹ

ಸೋಮವಾರಪೇಟೆ, ಆ.30: ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿರುವ ಸೋಮವಾರಪೇಟೆ-ಕೊಡ್ಲಿಪೇಟೆ ಮುಖ್ಯರಸ್ತೆಯ ಬದಿಗಳಲ್ಲಿ ಬೆಳೆದಿರುವ ಕುರುಚಲು ಗಿಡಗಳನ್ನು ತೆರವುಗೊಳಿಸಬೇಕೆಂದು ಕಡ್ಡಾಯ ಶಿಕ್ಷಣ ಕಾಯ್ದೆ ಜಾಗೃತಿ ಸಮಿತಿಯ ಇಂದ್ರೇಶ್ ಆಗ್ರಹಿಸಿದ್ದಾರೆ.

ಇಲಾಖೆಯಲ್ಲಿ ರಸ್ತೆ ನಿರ್ವಹಣೆಗೆಂದು ಅನುದಾನ ಮೀಸಲಿಟ್ಟಿದ್ದರೂ ಸಹ ಕಾಮಗಾರಿ ನಡೆಯುತ್ತಿಲ್ಲ. ತಕ್ಷಣ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಅವರು ಎಚ್ಚರಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: