ಮೈಸೂರು

ವಿದ್ಯಾವರ್ಧಕ ಕಾಲೇಜಿನಲ್ಲಿ ಎರಡು ದಿನಗಳ ಕಾರ್ಯಾಗಾರ

ಮೈಸೂರಿನ ವಿದ್ಯಾವರ್ಧಕ  ಇಂಜಿನಿಯರಿಂಗ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ &ಇಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಮತ್ಲಬ್ /ಸಿಮುಲಿಂಕ್ ಮೇಲೆ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವ ಗೌಡ ಕಾರ್ಯಾಗಾರವನ್ನು ಉದ್ಘಾಟಿಸಿದರು. ಈ ಸಂದರ್ಭ ಇಲೆಕ್ಟ್ರಿಕಲ್ಸ್&ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ಶೋಭಾ ಶಂಕರ್ ಉಪಸ್ಥಿತರಿದ್ದರು.

ಡಾ.ಸದಾಶಿವಗೌಡ ಮಾತನಾಡಿ ಕಾರ್ಯಾಗಾರವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು. ತಾಂತ್ರಿಕ ಕೌಶಲದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ತಿಳಿದಿರಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ.ಮೊಹಮ್ಮದ್ ಜಲಾಲುದ್ದೀನ್, ಪ್ರೊ.ಲೋಕೇಶ್ ಸಿ, ಪ್ರೊ.ಗೌತಮ್ ಎನ್ ಪಾಲ್ಗೊಂಡಿದ್ದರು. ಪ್ರೊ.ರಘುನಾಥ್ ಎಂ.ಜೆ, ಪ್ರೊ.ಸವ್ಯಸಾಚಿ ಜಿ.ಕೆ ಕಾರ್ಯಾಗಾರವನ್ನು ಆಯೋಜಿಸಿದ್ದರು

Leave a Reply

comments

Related Articles

error: