ಕರ್ನಾಟಕ

ಕೆಆರ್ ಎಸ್ ನಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ : ಬೋಟಿಂಗ್ ಸ್ಥಗಿತ

ರಾಜ್ಯ(ಮಂಡ್ಯ)ಆ.31:- ಕೆಆರ್ ಎಸ್  ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ  ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಂಡಿದ್ದು  ಪ್ರವಾಸಿಗರಿಗೆ ನಿರಾಶೆಯುಂಟಾಗಿದೆ. ನದಿ ಮೂಲಕ ತಮಿಳುನಾಡಿಗೆ 12 ಸಾವಿರ ಕೂಸೆಕ್  ನೀರು ಬಿಡುಗಡೆ ಮಾಡಿರುವ ಸರ್ಕಾರದ ವಿರುದ್ಧ ಸ್ಥಳೀಯರಿಂದ ಾಕ್ರೋಶ ವ್ಯಕ್ತವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: