ಮೈಸೂರು

ಪ್ರಾಯೋಗಿಕ ಚಲನಚಿತ್ರ “ಶವದ ಮುಂದೆ” ಅಡಿಯೋ- ಟ್ರೇಲರ್ ಬಿಡುಗಡೆ

ಸಿನಿಮಾ ನಿರ್ಮಾಣ ಮಾscan0020ಡಿ ಹಣ ಮಾಡುವ ಉದ್ದೇಶವಿಲ್ಲ. ಗಂಡ-ಹೆಂಡತಿ ಸಾಮರಸ್ಯ ಕೊರತೆಯಿಂದ ಕ್ಷಣಕಾಲದಲ್ಲಿಯೇ ಘಟಿಸುವ ಅವಘಡದ ಕಥಾಹಂದರವಿರುವ ಪ್ರಾಯೋಗಿಕ ಸೃಜನಾತ್ಮಕ ಚಲನಚಿತ್ರ ‘ಶವದ ಮುಂದೆ’ ಗಿನ್ನಿಸ್ ವಿಶ್ವದಾಖಲೆಗೆ ಸಜ್ಜಾಗಿದೆ ಎಂದು ಚಿತ್ರ ನಿರ್ದೇಶಕ ಸ್ನೇಹಮಯಿ ಕೃಷ್ಣ ತಿಳಿಸಿದರು.

ಅವರು ಇಂದು (ಅ.25) ಪತ್ರಕರ್ತರ ಭವನದಲ್ಲಿ “ಶವದ ಮುಂದೆ” ಚಿತ್ರದ ಅಡಿಯೋ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿ, ಸಾಮಾಜಿಕ ಸಂದೇಶವಿರುವ ಸಿನಿಮಾವು ಒಂದೇ ಕೋಣೆಯಲ್ಲಿ ಹಾಗೂ ಎರಡು ಪಾತ್ರದಾರಿಗಳ ನಡುವೆ ಸಾಗುವುದು. 1 ಗಂಟೆ 50 ನಿಮಿಷದ ಸಾಂಸರಿಕ ಕಥಾ ಹಂದರದ ಚಿತ್ರವಾಗಿದ್ದು, ನಾಯಕ-ನಾಯಕಿ ಹೊರತಾಗಿ ಗೊಂಬೆಗಳು ಪೋಷಕ ಪಾತ್ರ ನಿರ್ವಹಿಸಿವೆ. ನಾಯಕಿಯ ಶವದ ಮುಂದೆ ಸಾಗುವ ಚಿತ್ರವು ಜೀವನ ದೊಡ್ಡದು. ದುರಂಹಕಾರಕ್ಕೆ ಬಲಿಯಾಗಿ ಶಾಶ್ವತ ಜೀವನಕ್ಕಿಂತ ನಶ್ವರದ ಬದುಕಿಗೆ ಒತ್ತು ನೀಡಿ ಜೀವವನ್ನು ಬಲಿಕೊಟ್ಟು ಹೆಂಡತಿಯ ಶವದ ಮುಂದೆ ನಾಯಕನ ತುಮುಲಗಳು ಅತ್ಯಂತ ಚೆನ್ನಾಗಿ ಮೂಡಿ ಬಂದಿವೆ. ಚಿತ್ರಕ್ಕೆ ‘U’ ಸರ್ಟಿಫಿಕೆಟ್ ಲಭಿಸಿದೆ. ಚಿತ್ರ ನಿರ್ಮಾಣಕ್ಕೆ 13 ಲಕ್ಷ ರೂಪಾಯಿ ವೆಚ್ಚವಾಗಿದ್ದು, ರಾಜ್ಯಾದ್ಯಂತ ಚಿತ್ರ ಬಿಡುಗಡೆಗೊಳಿಸಲಾಗುವುದು. ಇದೊಂದು ಸಾಮಾಜಿಕ ಸಂದೇಶ ಹೊಂದಿರುವ ಚಿತ್ರವಾಗಿದ್ದು, ಸಂಘ ಸಂಸ್ಥೆಗಳ ಸಹಕಾರದೊಂದಿಗೆಯೂ ಪ್ರದರ್ಶನಗೊಳಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.scan0019

ಚಿತ್ರದ ನಾಯಕನ ಪಾತ್ರ ಕಾಲ್ಪನಿಕವಾಗಿದ್ದರೂ ವಾಸ್ತವತೆಗೆ ಹೆಚ್ಚು ಹತ್ತಿರವಾಗುವುದು. 70ರ ದಶಕದ ನಂತರ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳನ್ನು ಪಿ.ಲಂಕೇಶ್, ಶಂಕರನಾಗ್ ನಾಗಾಭರಣ ಹಾಗೂ ಇತರರು ನಿರ್ಮಿಸಿ ಹೊಸ ಅಲೆಯನ್ನು ಸೃಸ್ಟಿಸಿದ್ದರು ಎಂದು ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿ ಇತ್ತೀಚಿನ ದಿನಗಳಲ್ಲಿ ಸೃಜನಾತ್ಮಕ ಹಾಗೂ ಪ್ರಯೋಗಶೀಲ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹವೆಂದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕ ಆರ್ಯ, ಮಂಜುನಾಥ್, ನಾಯಕಿ ಶೃತಿ ಗೌಡ, ಹಾಗೂ ಸಂಗೀತ ನಿರ್ದೇಶಕ ಪ್ರಶಾಂತ್ ಆರಾಧ್ಯ ಉಪಸ್ಥಿತರಿದ್ದರು.

Leave a Reply

comments

Related Articles

error: