ಮೈಸೂರು

ಜಂಬೂಸವಾರಿಯ ಪುಷ್ಪಾರ್ಚನೆ ಗೆ ಬಿಗಿ ಭದ್ರತೆ ಏರ್ಪಡಿಸಲು ಜಿಲ್ಲಾಧಿಕಾರಿ ಡಿ.ರಂದೀಪ್ ಸೂಚನೆ

ಮೈಸೂರು,ಆ.31:- ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ  ಸಕಲ ಸಿದ್ಧತೆಗಳು ನಡೆದಿದ್ದು, ಸೆಪ್ಟೆಂಬರ್ 30 ರಂದು ಜರುಗಲಿರುವ  ವಿಜಯದಶಮಿಗೆ ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿಯ ಪುಷ್ಪಾರ್ಚನೆ ಗೆ  ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದಸರಾ ಮೆರವಣಿಗೆ ವೀಕ್ಷಣೆ ಮಾಡುವುದಕ್ಕೆ ಅರಮನೆ ಪ್ರವೇಶಿಸುವ  ಗೇಟ್ ಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಯಾವುದೇ ರೀತಿಯ ಗೊಂದಲವಾಗದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ರಂದೀಪ್  ಸೂಚನೆ ನೀಡಿದ್ದಾರೆ. ಆವರಣದಲ್ಲಿ ಪೆಂಡಲ್ ವ್ಯವಸ್ಥೆ, ಆಸನದ ವ್ಯವಸ್ಥೆ ಸೇರಿದಂತೆ ಇತರೇ ಸಿದ್ಧತೆಗಳು ತುಂಬಾ ಅಚ್ಚುಕಟ್ಟಾಗಿ ಇರಬೇಕು. ಒಳಗಡೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ  ಹೆಚ್ಚಿನ ಪೋಲಿಸ್ ರನ್ನು ನಿಯೋಜಿಸಿ ಎಂದು ಡಿಸಿಪಿ ವಿಷ್ಣುವರ್ಧನ್ ಗೆ  ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಈ ಬಾರಿ ಬರೋಬ್ಬರಿ 30 ಸಾವಿರ ಜನರಿಗೆ  ಕುಳಿತುಕೊಳ್ಳುವ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಸದ್ಯ ಆರು ಗೇಟ್ ಗಳಿದ್ದು, ಇನ್ನೆರಡು ಗೇಟ್ ಗಳನ್ನು ತೆರೆಯಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: