ಮೈಸೂರು

ಬಿ.ಎನ್.ಐ ಉದ್ಯಮ ಲೋಕದ ವಿಶ್ವಾಸಾರ್ಹ ಸಂಸ್ಥೆ: ಮಹೇಶ್ ಶ್ರೀನಿವಾಸ್

ಬಿ.ಎನ್.ಐ. (ಬಿಸಿನೆಸ್ ನೆಟ್ ವರ್ಕ್ ಇಂಟರ್ ನ್ಯಾಷನಲ್)ಸಂಸ್ಥೆಯು   ಕಳೆದ 32 ವರ್ಷಗಳಿಂದ ಸುಮಾರು 69 ದೇಶಗಳಲ್ಲಿ 7,600 ಚಾಪ್ಟರುಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು ಉದ್ಯಮ ಲೋಕದ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ ಎಂದು ಬಿ.ಎನ್.ಐ ಇಂಡಿಯಾದ ಮುಖ್ಯಸ್ಥ ಮಹೇಶ್ ಶ್ರೀನಿವಾಸ್ ತಿಳಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯ ಮೈಸೂರು ಘಟಕದ ಐದನೇ ವಾರ್ಷಿಕೋತ್ಸವವು ಅ.19ರಂದು ಹೋಟೆಲ್ ಗ್ರಾಂಡ್ ಮರ್ಕ್ಯೂರಿಯಲ್ಲಿ ನಡೆಯಿತು. 2011ರಲ್ಲಿ ಬಿ.ಎನ್.ಐನ ಚಾಪ್ಟರ್ ಒಂದರ ಯುವರಾಜ ಐದನೇ ವರ್ಷದ ಸಂಭ್ರಮಾಚರಣೆಯಾಗಿದ್ದು ಸಂಸ್ಥೆಯು ಪ್ರಸಕ್ತ ಸಾಲಿನ ಜನವರಿಯಿಂದ ಅಕ್ಟೋಬರ್ ವರೆಗೆ ಸುಮಾರು ನಾಲ್ಕು ಸಾವಿರ ಐದನೂರು ರೂಪಾಯಿಗಳ ವ್ಯವಹಾರ ನಡೆಸಿದೆ. ವಿಶ್ವದಲ್ಲಿ ಸುಮಾರು ಇಪ್ಪತ್ಮೂರು ಸಾವಿರ ಸದಸ್ಯರನ್ನು ಹೊಂದಿದ್ದು ಮೈಸೂರಿನಲ್ಲಿ 257 ಸದಸ್ಯರಿದ್ದು ಎರಡು ಸಾವಿರ ಸದಸ್ಯರ ನೋಂದಣಿ ಗುರಿಯನ್ನು ಪ್ರಸಕ್ತ ಸಾಲಿನಲ್ಲಿ ಹೊಂದಲಾಗಿದೆ. 275 ಸದಸ್ಯರಲ್ಲಿ ಸುಮಾರು 25 ಮಹಿಳೆಯರು ಸಂಸ್ಥೆಯ ಸದಸ್ಯರಿದ್ದಾರೆ. ಕಳೆದ ಐದು ವರ್ಷಗಳಿಂದ ಸುಮಾರು 220 ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ 225 ಕೋಟಿ ರೂಪಾಯಿಗಳ ಗುರಿಯನ್ನು ಹೊಂದಲಾಗಿದೆ.  ಬಿಎನ್ ಐನ ಜೊತೆ ಜೋಡಿಸಿಕೊಳ್ಳುವುದರಿಂದ ವ್ಯವಹಾರಿಕವಾಗಿ ಉನ್ನತ ಪ್ರಗತಿಯನ್ನು ಸಾಧಿಸಬಹುದು. ಕಳೆದ ವರ್ಷ 3870 ಕೋಟಿ ವಹಿವಾಟು ನಡೆಸಿದ್ದು ವಿಶ್ವದಾದ್ಯಂತ ವ್ಯವಹಾರ ನಡೆಸುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಮುರಳಿ ಶ್ರೀನಿವಾಸ್,  ರೇಣು  ಹಾಗೂ ಇತರರು ಹಾಜರಿದ್ದರು.

Leave a Reply

comments

Related Articles

error: