ಮೈಸೂರು

ಎರಡು ದಿನಗಳ ಯೋಗಾಸನ ಸ್ಪರ್ಧೆಗೆ ಚಾಲನೆ

ಮೈಸೂರು ವಿಭಾಗದ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಆಯೋಜಿಸಲಾಗಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗೆ ಮಂಗಳವಾರ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಶಿಕ್ಷಕರ ಭವನದಲ್ಲಿ ಎರಡು ದಿನಗಳ ಯೋಗಾಸನ ಸ್ಪರ್ಧೆಯನ್ನು ಆಯೋಜಿಸಿದೆ. ಡಿಡಿಪಿಐ ಉಪ ನಿರ್ದೇಶಕ ಎಚ್‍.ಆರ್. ಬಸಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ, ದೈಹಿಕ ಬೆಳವಣಿಗೆಗೆ ಯೋಗ ಬಹು ಸಹಕಾರಿ. ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಯೋಗ ಪ್ರದರ್ಶನ ನೀಡಿ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ದೈಹಿಕ ಶಿಕ್ಷಣ ಇಲಾಖೆ ಮತ್ತು ಜಿಪಂ ಒಳ್ಳೆಯ ವೇದಿಕೆ ನೀಡಿದೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸಿ.ಮರಿಯಪ್ಪ ಅವರು ‘ಸಿಟಿಟುಡೆ’ ಯೊಂದಿಗೆ ಮಾತನಾಡಿ, 7 ತಾಲೂಕಿನ ಸುಮಾರು 237 ವಿದ್ಯಾರ್ಥಿಗಳು ಯಾಗಾಸನ ಸ್ಪರ್ಧೆಗೆ ಹೆಸರನ್ನು ನೋಂದಾಯಿಸಿದ್ದಾರೆ. 14 ವರ್ಷದೊಳಗಿನ ಮತ್ತು 17 ವರ್ಷದೊಳಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎರಡು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಕಲಾತ್ಮಕ ಮತ್ತು ಲಯಬದ್ಧ ಯೋಗ ಸ್ಪರ್ಧೆಯನ್ನು ಆಯೋಜಿಸಿದ್ದೇವೆ ಎಂದರು.

ಡಾ.ಗಣೇಶ್ ಕುಮಾರ್, ಬಸವರಾಜು ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: