ಮೈಸೂರು

ಕೆಲವರಿಗೆ ಹೃದಯವಿದ್ದರೂ ಹೃದಯವಂತಿಕೆ ಇಲ್ಲ: ಸಾಹಿತಿ ಸಿ.ಪಿ ಕೃಷ್ಣಕುಮಾರ್

ಮೈಸೂರು,ಆ.31:- ನಮ್ಮಲ್ಲಿ ಎಲ್ಲರಲ್ಲೂ ಹೃದಯ ಎಂಬ ಅಂಗವಿದೆ, ಅದು ಹುಟ್ಟಿನಿಂದಲೇ ಬಂದಿದ್ದು. ಆದರೆ ಅಂತಹವರಲ್ಲಿ ಕೆಲವರಿಗೆ ಹೃದಯವಂತಿಕೆ ಇಲ್ಲ. ಅಂತಹವರು ಸಹೃದಯರಲ್ಲ, ಇಂತಹ ಹೃದಯವಂತಿಕೆ ಇಲ್ಲದವರಿಂದಲೇ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಸಾಹಿತಿ ಸಿ.ಪಿ ಕೃಷ್ಣಕುಮಾರ್ ಅವರು ಹೇಳಿದರು.
ನಗರದ ಗಾನಭಾರತಿ ಸಭಾಂಗಣದಲ್ಲಿ ದಾಸ್ ತಿ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ ವತಿಯಿಂದ ಕಾಲೇಜು ದಿನಾಚರಣೆ ಹಾಗೂ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು.  ಜಗತ್ತಿನಲ್ಲಿ ಅನೇಕರು ವೈದ್ಯರಾಗಲು ಬಯಸುತ್ತಾರೆ ಏಕೆಂದರೆ ಅದು ಗೌರವಾನ್ವಿತ ಹುದ್ದೆ. ವೈದ್ಯರಾದವರಿಗೆ ಸಮಾಜದಲ್ಲಿ ಗೌರವಯುತವಾದ ಸ್ಥಾನವಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.  ಹೆಲ್ತ್ ಎಂಬ ಪದಕ್ಕೆ ಎಲ್ಲರೂ ಆರೋಗ್ಯ ಎಂಬ ಪದವನ್ನು ಹೆಚ್ಚು ಬಳಕೆ ಮಾಡುತ್ತಾರೆ. ಆದರೆ ಈ ಪದ ಬಳಕೆ ನನಗೆ ತೃಪ್ತಿಯಿಲ್ಲ ಇದರ ಬದಲಾಗಿ ಸ್ವಾಸ್ಥ್ಯ ಎಂಬ ಪದ ಬಳಸಬಹುದು. ಏಕೆಂದರೆ ಬಹಳ ಹಿಂದೆ ಆರೋಗ್ಯ ಎಂದು ಕರೆಯುವ ಮೊದಲು ಸ್ವಾಸ್ಥ್ಯ ಎಂದು ಕರೆಯುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಬಿ. ಬಸವರಾಜು, ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ತಿಮ್ಮಯ್ಯ, ಸಾಹಿತಿಗಳಾದ ಕೆ. ಭೈರವಮೂರ್ತಿ, ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕರಾದ ಎಂ.ಜಿ ಅರಸ್, ಕಾಲೇಜು ಪ್ರಾಂಶುಪಾಲರಾದ ಬಿ. ವಿಜಯಪ್ರೇಮಕುಮಾರಿ ಅವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಸ್,ಎಸ್.ಎಚ್)

Leave a Reply

comments

Related Articles

error: