ಪ್ರಮುಖ ಸುದ್ದಿ

ಪಾಕ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ: 60 ಮಂದಿ ಸಾವು

ಪಾಕಿಸ್ತಾನದ ಖ್ವೆಟ್ಟಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಸೋಮವಾರ ಮಧ್ಯರಾತ್ರಿ ಉಗ್ರರು ದಾಳಿ ನಡೆಸಿ 60 ಮಂದಿಯ ಸಾವಿಗೆ ಕಾರಣರಾಗಿದ್ದಾರೆ. 118 ಮಂದಿ ಗಾಯಗೊಂಡಿದ್ದು, ಪಾಕಿಸ್ತಾನದಲ್ಲಿ ಈ ವರ್ಷ ನಡೆದ ಹಿಂಸಾಚಾರಗಳಲ್ಲಿ ಅತ್ಯಂತ ಭಯಾನಕ ದಾಳಿ ಇದಾಗಿದೆ ಎನ್ನಲಾಗಿದೆ.

ಬಲೂಚಿಸ್ತಾನದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಮೇಲೆ ರಾತ್ರಿ 11.10ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಪಾಕಿಸ್ತಾನ ಭದ್ರತಾ ಪಡೆಯು ಪ್ರತಿದಾಳಿ ನಡೆಸಿ ಅಕಾಡೆಮಿಯಲ್ಲಿದ್ದ ನೂರಕ್ಕೂ ಹೆಚ್ಚು ಕೆಡೆಟ್‍ಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತರಬೇತಿ ಕೇಂದ್ರದ ಹಾಸ್ಟೆಲ್‍ನ ಮುಖ್ಯದ್ವಾರದಿಂದ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿ, ಕೆಲ ಪೊಲೀಸರನ್ನು ಒತ್ತೆಯಾಳಾಗಿರಿಸಿದ್ದಾರೆ. ಐದರಿಂದ ಆರು ಮಂದಿಯಿದ್ದ ಉಗ್ರರ ತಂಡದಲ್ಲಿ ಮೂವರನ್ನು ಹೊಡೆದುರುಳಿಸಲಾಗಿದ್ದು, ನಿಷೇಧಿತ ‘ಲಷ್ಕರ್ ಇ ಜಾಂಗ್ವಿ’ ಸಂಘಟನೆಯು ಈ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.

Leave a Reply

comments

Related Articles

error: