ಪ್ರಮುಖ ಸುದ್ದಿಮೈಸೂರು

ಪಡಿತರ ಚೀಟಿಯೊಂದಿಗೆ ಆಧಾರ್ ನಂಬರ್ ಜೋಡಣೆಗೆ ಅಕ್ಟೋಬರ್ 31 ಕೊನೆಯ ದಿನ: ಡಿ.ರಂದೀಪ್

ಎಲ್ಲ ಪಡಿತರ ಚೀಟಿದಾರರು ಆಧಾರ್ ಕಾರ್ಡ್ ನಂಬರನ್ನು ಪಡಿತರ ಚೀಟಿಯೊಂದಿಗೆ ಜೋಡಿಸಲು ಅಕ್ಟೋಬರ್ 31ಕೊನೆಯ ದಿನವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ರಂದೀಪ್  ಅಕ್ಟೋಬರ್ 31ರೊಳಗೆ ಆಧಾರಕಾರ್ಡ್ ಲಿಂಕ್ ನ್ನು ಪಡಿತರ ಚೀಟಿಯೊಂದಿಗೆ ಜೋಡಿಸದಿದ್ದಲ್ಲಿ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಅವರು ವಂಚಿತರಾಗಲಿದ್ದಾರೆ ಅದರಿಂದ ಎಲ್ಲ ಪಡಿತರ ಚೀಟಿದಾರರು ಅಕ್ಟೋಬರ್ ಕೊನೆಯೊಳಗೆ ಮಕ್ಕಳನ್ನೊಳಗೊಂಡಂತೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಿಸಬೇಕಿದೆ ಎಂದರು.

ಈಗಾಗಲೇ 84% ಆಗಿದ್ದು, ಇನ್ನುಳಿದ 16% ಜನರಿಗೆ ನೆನಪಿಸುವ ಕಾರ್ಯ ನಡೆಯುತ್ತಿದೆ. ಜನರು ಮೈಸೂರಿನ ಕೇಂದ್ರಗಳಾದ ಅಟಲ್ ಜೀ ಜನಸ್ನೇಹಿ ಕೇಂದ್ರ, ಗ್ರಾಮಪಂಚಾಯತ್ ಅಥವಾ ತಾಲೂಕು ಆಫೀಸ್ ಗಳಲ್ಲಿ ಆಧಾರ್ ಕಾರ್ಡ್ ನಂಬರ್ ಸಲ್ಲಿಸಬಹುದು ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಮಾತನಾಡಿ ಡಿಸೆಂಬರ್ 15ರಂದು ಮೈಸೂರನ್ನು ಸೀಮೇಎಣ್ಣೆ ಮುಕ್ತ ನಗರ ಎಂದು ಘೋಷಿಸಲಾಗುವುದು. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಎಲ್ಲ ಬಿಪಿಎಲ್ ಕಾರ್ಡ್ ದಾರರಿಗೆ ಸಬ್ಸಿಡಿ ಸಿಗಲಿದೆ. ಬಿಪಿಎಲ್ ಕಾರ್ಡ್ ಮಾಲಕರು 1,600ರೂ.ಅನ್ನು ಪಾವತಿಸಿ ಸೇವೆ ಪಡೆಯಬಹುದು ಎಂದು ತಿಳಿಸಿದರು.

Leave a Reply

comments

Related Articles

error: