ಮೈಸೂರು

ಹಿಂದಿ ಬಿ.ಎಡ್ ತಿದ್ದುಪಡಿ ಅಭ್ಯರ್ಥಿಗಳಿಗೆ ಕಂಟಕ: ಕೆ.ಮಂಜುನಾಥ್ ನಾಯಕ್

ರಾಜ್ಯ ಸರ್ಕಾರವು ಶಿಕ್ಷಣದ ಉನ್ನತೀಕರಣದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಹಿಂದಿ ಪರಿಷತ್ ನಡುವೆ ನಡೆದಿರುವ ಸಂಘರ್ಷ ದಿಂದ  ಅಮಾಯಕ ಪದವೀಧರರು ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ಹಿಂದಿ ಭೋದಕ ಸಂಘದ ಅಧ್ಯಕ್ಷ ಕೆ.ಮಂಜುನಾಥ್ ನಾಯಕ್ ಬೇಸರ ವ್ಯಕ್ತಪಡಿಸಿದರು.

ಅವರು, ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರವು ಹಿಂದಿ ಪರಿಷತ್ ನಡೆಸುತ್ತಿದ್ದ ಪ್ರವೀಣ, ರತ್ನ, ವಿಶಾರದಾ ಪರೀಕ್ಷೆಗಳನ್ನು ಶಾಲೆಗಳಲ್ಲಿ ಹಿಂದಿ ಶಿಕ್ಷಕರ ನೇಮಕಕ್ಕೆ ಪರಿಗಣಿಸಲಾಗುತ್ತಿದ್ದು ಈ ನಿಯಮವನ್ನು ಸರ್ಕಾರವು ತಿದ್ದುಪಡಿ ತಂದಿದ್ದು ಶಿಕ್ಷಕ ಆಕಾಂಕ್ಷಿಗಳು ಪದವಿ, ಬಿ.ಎಡ್ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಹಿಂದಿ ಪರಿಷದ್ ನಲ್ಲಿ ಪ್ರವೇಶ, ರತ್ನ, ವಿಶಾರದಾ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಉದ್ಯೋಗಾಕಾಂಕ್ಷಿಗಳಿಗೆ ಈ ಕಾನೂನು ನುಂಗಲಾರದ ಬಿಸಿತುಪ್ಪವಾಗಿದೆ. ತಿದ್ದುಪಡಿಯನ್ನು 2016ರ ನವೆಂಬರ್ 29ರವರೆಗೆ ತಡೆ ಹಿಡಿಯಬೇಕು ಎಂದು ಆಗ್ರಹಿಸಿ, ಹಿಂದಿ ಬಿ.ಎಡ್ ಗೆ 1964ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಮದ್ರಾಸ್  ವರದಿಯ ಪ್ರಕಾರ ಕರ್ನಾಟಕದಲ್ಲಿ ಇತರೆ ವಿವಿಗಳು ನೀಡುವ ಬಿ.ಎಡ್ ಪದವಿ ಸಮವೆಂದು ಆದೇಶವಿದ್ದು ಈ ಕಾನೂನಿಗೆ ಸರ್ಕಾರದ ತಿದ್ದುಪಡಿ ತಂದಿದ್ದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಕಂಟಕವಾಗಿದೆ.  ಸಿ.ವಿ.ಆರ್. ನಿಯಮದಡಿ ಎಸ್.ಎಸ್.ಎಲ್.ಸಿ. ಮಂಡಳಿಯಲ್ಲಿ ಹಿಂದಿ ಬಿ.ಎಡ್. ಮುಗಿಸಿದ ಪದವೀಧರರಿಗೆ ಮಾನ್ಯತೆ ಇಲ್ಲವಾಗಿದ್ದು ಇದರಿಂದ ಹಿಂದಿ ಶಿಕ್ಷಕ ಅಭ್ಯರ್ಥಿಗಳ ಜೀವನದ ಭವಿಷ್ಯವೂ ಡೋಲಾಯಮಯವಾಗಿದ್ದು ಕೆಲವರು ಪೋನ್ ಮೂಲಕ ಆತ್ಮಹತ್ಯೆಯ ಪ್ರಯತ್ನವನ್ನು ಮುಂದಿಟ್ಟಿದ್ದಾರೆ. ಆದ್ದರಿಂದ, ಸರ್ಕಾರವೂ ತಂದಿರುವ ತಿದ್ದುಪಡಿಯನ್ನು ನವೆಂಬರ್‍ವರೆಗೆ ತಡೆಹಿಡಿಯಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಹಿಂದಿ ಶಿಕ್ಷಕಿ ಮಹಾಲಕ್ಷ್ಮೀ ಹಾಗೂ ಇತರ ಹಿಂದಿ ಶಿಕ್ಷಕರು ಉಪಸ್ಥಿತರಿದ್ದರು.

Leave a Reply

comments

Related Articles

error: