ಮೈಸೂರು

ದಸರಾ ಮಹೋತ್ಸವ ಹಿನ್ನಲೆ : ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭ

ಮೈಸೂರು,ಸೆ.1:- ವಿಶ್ವವಿಖ್ಯಾತ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ನಡೆದಿದ್ದು, ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭವಾಗಿದೆ.
ಕ್ಯಾಪ್ಟನ್ ಅರ್ಜುನ ಸುಮಾರು ಮುನ್ನೂರ ಐವತ್ತು ಕೆಜಿ ಭಾರ ಹೊರಲಿದ್ದಾನೆ. ಸಿಬ್ಬಂದಿಗಳು ಅರ್ಜುನನ ಬೆನ್ನಿಗೆ ತೊಟ್ಟಿಲು ಕಟ್ಟಿ ಮರಳು ಮೂಟೆಗಳನ್ನು ಹೇರಿದ್ದರು. ಅರ್ಜುನ ಮತ್ತವನ ಸಂಗಡಿಗರು ಭಾರ ಹೊತ್ತು ನಡಿಗೆ ತಾಲೀಮು ನಡೆಸಿದರು.
ಅರ್ಜುನನಿಗೆ ಕುಮ್ಕಿ ಆನೆಗಳಾದ ವರಲಕ್ಷ್ಮಿ ಕಾವೇರಿ  ಜೊತೆಯಾದರು. ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ತಾಲೀಮು ಆರಂಭವಾಗಿದೆ. ಎರಡನೇ ಹಂತದ ತಾಲೀಮಿನಲ್ಲಿ ಎಲ್ಲಾ 15 ಆನೆಗಳು ಪಾಲ್ಗೊಂಡಿವೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: