ಮೈಸೂರು

ರಸ್ತೆ ಡಾಂಬರೀಕರಣಕ್ಕೆ ಆಗ್ರಹ: ಪ್ರತಿಭಟನೆ

ಮೈಸೂರಿನ ಕುವೆಂಪುನಗರದ ಡಿಪೋ ಸರ್ಕಲ್‍ನಲ್ಲಿ 4-5 ತಿಂಗಳ ಹಿಂದೆ ಯುಜಿಡಿ ಕಾಮಗಾರಿ ಮಾಡಿ ರಸ್ತೆಯನ್ನು ಅಗೆದು ಮುಚ್ಚಿದ್ದಾರೆ. ಬಳಿಕ ಯಾವುದೇ ರಸ್ತೆ ಕಾಮಗಾರಿ ಮಾಡದೆ ಹಾಗೆ ಬಿಟ್ಟಿದ್ದು ಇದರಿಂದ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದೆರೆಯಾಗುತ್ತಿದೆ. 3-4 ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಜೆಡಿಎಸ್ ಮುಖಂಡರಾದ ಗಿರೀಶ್ ಗೌಡ, ನಾಗೇಂದ್ರ, ಗುರು ನಗರಪಾಲಿಕೆ ಸದಸ್ಯರು ಮತ್ತು ಮೊಹಲ್ಲಾದ ಅಂಗಡಿ ಮಾಲೀಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಡಿಪೋ ಸರ್ಕಲ್‍ನಲ್ಲಿದ್ದ 3-4 ರಸ್ತೆಗಳನ್ನು ಕೂಡ ಅಗೆಯಲಾಗಿದೆ. ಇಲ್ಲಿ ಕೆಎಸ್‍ಆರ್‍ಟಿಸಿ ಡಿಪೋಯಿದ್ದು, ಹೆಚ್ಚಿನ ಬಸ್‍ಗಳು ಓಡಾಡುವುದರಿಂದ ಧೂಳಿನಿಂದಾಗಿ ವಾಸ ಮಾಡುವುದಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಡಾಂಬರೀಕರಣವನ್ನು ಮಾಡಬೇಕೆಂದು ಆಗ್ರಹಿಸಿದ್ದಾರೆ.

Leave a Reply

comments

Related Articles

error: