ಮೈಸೂರು

ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ವಿರೋಧ : ಗಡಿಪಾರು ಮಾಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಸೆ.1:- ಕಾಂಗ್ರೆಸ್ ಮಹಿಳಾ ಘಟಕದ  ರಾಜ್ಯಾಧ್ಯಕ್ಷೆ  ಲಕ್ಷ್ಮಿ ಹೆಬ್ಬಾಳ್ಕರ್ ಕನ್ನಡ ನೆಲದಲ್ಲಿ ಜನ್ಮ ತಳೆದು ಮಹಾರಾಷ್ಟ್ರ ಪರ ಮಾತನಾಡಿರುವುದನ್ನು ಖಂಡಿಸಿ ಮೈಸೂರು ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆಯ ಮುಂದೆ ಬಿಜೆಪಿ ಮಹಿಳಾಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ದೇವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕನ್ನಡದ ನೆಲ,ಜಲವನ್ನು ಅನುಭವಿಸಿ ಕನ್ನಡ ಜನತೆಯ ಹಣವನ್ನು ಕಬಳಿಸಿ ಐಶಾರಾಮಿ ಜೀವನ ನಡೆಸುತ್ತಿದ್ದು, 200ಕೋಟಿ ಹಣವನ್ನು ಹಾಕಿ ತನ್ನದೇ ಆದ ಹರ್ಷಶುಗರ್ ಕಾರ್ಖಾನೆಯನ್ನು ಸ್ವಂತವಾಗಿ ಹೊಂದಿದ್ದಾರೆ. ಇದೀಗ ಓಟ್ ಬ್ಯಾಂಕ್  ರಾಜಕಾರಣ ಮಾಡಲು ಹೊರಟು ಮರಾಠಿಗರನ್ನು ಓಲೈಸಲು ಸುಪ್ರೀಂಕೋರ್ಟ್ ಆದೇಶ ಬಂದು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಮಹಾರಾಷ್ಟ್ರದ ಬಾವುಟವನ್ನು ನಾನೇ ಮೊದಲು ಹಿಡಿದು ಜೈಕಾರ ಹಾಕುತ್ತೇನೆ ಎಂದು ಹೇಳುವುದರ ಮೂಲಕ ಕನ್ನಡ ನಾಡಿಗೆ, ಕನ್ನಡ ಜನತೆಗೆ ದ್ರೋಹ ಬಗೆದಿದ್ದಾರೆ. ಅವರನ್ನು ಈ ಕೂಡಲೇ ಗಡಿಪಾರು ಮಾಡಬೇಕು, ಪಕ್ಷದ ಸ್ಥಾನದಿಂದಲೂ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಹೇಮಾ ನಂದೀಶ್, ಮುಖಂಡರುಗಳಾದ ಶಾಂತಾ ಸೋಮಶೇಖರ್, ಕಮಲಮ್ಮ, ಸೌಭಾಗ್ಯಮೂರ್ತಿ. ಲೀಲಾಶೆಣೈ, ಪದ್ಮಪುಟ್ಟರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: