ಪ್ರಮುಖ ಸುದ್ದಿ

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ: ಜೆಸಿಬಿ, ಟ್ರ್ಯಾಕ್ಟರ್ ವಶ

ಪ್ರಮುಖ ಸುದ್ದಿ, ಕೊರಟಗೆರೆ, ಸೆ.೧: ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ ನಡೆಸಿದ ಕೊರಟಗೆರೆ ಪೊಲೀಸರು ಎರಡು ಜೆಸಿಬಿ, ಎರಡು ಟ್ರಾಕ್ಟರ್ ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬೈರಗೊಂಡ್ಲು ಕೆರೆ ಮತ್ತು ಮಾವತ್ತೂರು ಕೆರೆ ಹಿಂಭಾಗದಲ್ಲಿ ಅಕ್ರಮ ಮರಳು ಸಾಗಣೆ ಮಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೊರಟಗೆರೆ ಆರಕ್ಷಕ ನಿರೀಕ್ಷಕ ಮುನಿರಾಜು ನೇತೃತ್ವದಲ್ಲಿ ೪ ಕಡೆ ದಾಳಿ ಮಾಡಿದ್ದು, ಮರಳು ಸಮೇತ ಎರಡು ಟ್ರ್ಯಾಕ್ಟರ್ ಹಾಗೂ ಜೆಸಿಬಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಬೈರಗೊಂಡ್ಲು ಕೆರೆ ಮತ್ತು ಮಾವತ್ತೂರು ಕೆರೆಯ ಹಿಂಬಾಗ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬಿದ್ದಂತಾಗಿದೆ. ಈ ಸಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: