ಮೈಸೂರು

ಈರನಗೆರೆಯಲ್ಲಿ ಡೆಂಗ್ಯೂ ಕುರಿತು ಜಾಗೃತಿ ಜಾಥಾ

ಮೈಸೂರು,(ಈರನಗೆರೆ),ಸೆ.1-ಸೊಳ್ಳೆಗಳ ನಿಯಂತ್ರಣ ಡೆಂಗ್ಯೂ ಪಲಾಯನ, ಡೆಂಗ್ಯೂ ಜ್ವರದ ಬಗ್ಗೆ ಉದಾಸಿನ ಮಾಡಬೇಡಿ, ಮನೆಯ ಸುತ್ತ ನಿಂತ ನೀರು ಸೊಳ್ಳೆಗಳ ತವರು, ಸಿಮೆಂಟ್ ತೊಟ್ಟಿ ಹಾಗೂ ಡ್ರಂಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿ ಹೀಗೆ ಅನೇಕ ಘೋಷಣಾ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಮತ್ತು ಈರನಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆಯ ಅಡ್ವೊಕೇಸಿ ಸಭೆಯ ಕಾರ್ಯಕ್ರಮದ ಅಂಗವಾಗಿ ಈರನಗೆರೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಈರನಗೆರೆಯ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದ ವಿದ್ಯಾರ್ಥಿಗಳು ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಜ್ವರ ನಿಯಂತ್ರಣದ ಕುರಿತು, ಮುಂಜಾಗ್ರತಾ ಕ್ರಮಗಳ ಕುರಿತಾದ ಕರಪತ್ರಗಳನ್ನು ಹಂಚಿದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: