ಮೈಸೂರು

ದಸರಾ ಗೊಂಬೆ ಪ್ರದರ್ಶನ ಉದ್ಘಾಟನೆ

ಮೈಸೂರು,ಸೆ.1:-  ನಗರದ  ಪ್ರತಿಮಾ ಗ್ಯಾಲರಿ, 91, ಆಮ್ರಪಾಲಿ ಸೀರೆ ಮಳಿಗೆಯ ಮೇಲೆ, ನಜರ್‌ಬಾದ್ ಮುಖ್ಯರಸ್ತೆಯಲ್ಲಿ ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ವತಿಯಿಂದ ಬೊಂಬೆ ಮನೆ ದಸರೆಯ ಗೊಂಬೆ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಿತು.

ಈ ಪ್ರದರ್ಶನವನ್ನು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪದ್ಮಾ ಶೇಖರ್ ಅವರು ಉದ್ಘಾಟಿಸಿದರು. ಹಾಗೂ ವಿಶೇಷ ಅಂಕಣದ ಉದ್ಘಾಟನೆಯನ್ನು ಮೇಲುಕೋಟೆ ಸಂಸ್ಕೃತ ಸಂಶೋಧನ ಸಂಸತ್ ನಿರ್ದೇಶಕ ಪೊ.ಶ್ರೀನಿವಾಸ ವರಖೇಡಿ ಅವರು ಉದ್ಘಾಟಿಸಿದರು. ಈ ವೇಳೆ ಎಸ್.ಕುಮಾರ್  ಉಪಸ್ಥಿತವಿರಿದ್ದರು. ವೈವಿಧ್ಯಮಯ ಗೊಂಬೆಗಳು ಗೊಂಬೆಮನೆಯಲ್ಲಿ ಅಲಂಕೃತವಾಗಿದ್ದು, ಗಮನ ಸೆಳೆಯುತ್ತಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: