ಕರ್ನಾಟಕಮೈಸೂರು

ಪಿಎಫ್ಐ, ಕೆಎಫ್ಟಿ, ಎಸ್ಟಿಪಿಐ ಸಂಘಟನೆಗಳ ನಿಷೇಧಕ್ಕೆ ಒತ್ತಾಯಿಸಿ ಮಂಗಳೂರುವರೆಗೆ ಬೈಕ್ ರ್ಯಾಲಿ

ಮೈಸೂರು,ಸೆ.1 : ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಿಗೆ ಸಂಬಂಧಪಟ್ಟಂತೆ ಪಿಎಫ್ಐ, ಕೆಎಫ್ಟಿ ಮತ್ತು ಎಸ್ಪಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಬಿಜೆಪಿಯ ಯುವಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಮೈಸೂರಿನಿಂದ 2 ಸಾವಿರ ಕಾರ್ಯಕರ್ತರು ಬೈಕ್ ಗಳಲ್ಲಿ ತೆರಳಲಿದ್ದಾರೆಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಎಸ್.ವಿ.ರಾಘವೇಂದ್ರ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಸೆ.5 ರಿಂದ 7ರವರೆಗೆ ಮಂಗಳೂರು ಚಲೋ ಬೃಹತ್ ರ್ಯಾಲಿ ನಡೆಯಲಿದ್ದು ಅದಕ್ಕೆ ಮೈಸೂರು, ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರಗಳ ಮತ್ತು ಬಿಜೆಪಿ ಎಲ್ಲಾ ಘಟಕಗಳ ಸಾವಿರಾರು ಕಾರ್ಯಕರ್ತರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬೆಳಗ್ಗೆ 9.30ಕ್ಕೆ ಹೊರಡಲಿದೆ ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷರು ಆದ ಸಂಸದ ಪ್ರತಾಪ್ ಸಿಂಹ ಹಾಗೂ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಬೈಕ್ ರ್ಯಾಲಿಯ ನೇತೃತ್ವ ವಹಿಸುವರು ಎಂದು ಹೇಳಿದರು.

ಕ್ಯಾತಮಾರನಹಳ್ಳಿಯ ರಾಜು, ಮಂಗಳೂರಿನ ಶರತ್ ಮಡಿವಾಳ ಸೇರಿದಂತೆ ಇದುವರೆಗೂ ಹಿಂದುಪರ ಕಾರ್ಯಕರ್ತರ 8 ಮಂದಿ ಹತ್ಯೆಯಾಗಿದ್ದು ಇದರಲ್ಲಿ ಪಿಎಫ್ಐ, ಕೆಎಫ್ಡಿ ಮತ್ತು ಎಸ್ಪಿಪಿಐ ಕಾರ್ಯಕರ್ತರ ಕೈವಾಡವಿರುವುದು ಸಾಭೀತಾಗಿದ್ದು ಮುಖ್ಯಮಂತ್ರಿ ಸಿದ್ದರಾಮ್ಯಯ ಸಂಘಟನೆಗಳ ವಿರುದ್ಧ ಮೃದು ಧೋರಣೆ ತಾಳಿದ್ದಾರೆಂದು ಆರೋಪಿಸಿದರು. ಈ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು, ಸಚಿವ ರಮಾನಾಥ ರೈ ಮಂಗಳೂರು ಹತ್ಯೆಗೆ ಪರೋಕ್ಷವಾಗಿ ಸಹಕರಿಸಿರುವ ಹಿನ್ನಲೆಯಲ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಘಟನೆಗಳನ್ನು ಸಿಬಿಐಗೆ ವಹಿಸಬೇಕೆಂದು ಎಂಬುದು ಮಂಗಳೂರು ಚಲೋ ರ್ಯಾಲಿಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬೈಕ್ ರ್ಯಾಲಿಯ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಕೆ.ದೇವರಾಜು, ನಗರ ಯುವ ಮೋರ್ಚಾ ಅಧ್ಯಕ್ಷ ಗೋಕುಲ್ ಗೋವರ್ಧನ್, ಪ್ರಧಾನ ಕಾರ್ಯದರ್ಶಿ ಬಿ.ಸಂಪತ್ತು ಮತ್ತು ಸೋಮಶೇಖರ್, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ಜಯಶಂಕರ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಕಿರಣ್ ಗೌಡ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: