ಸುದ್ದಿ ಸಂಕ್ಷಿಪ್ತ

ಸೆ.3ಕ್ಕೆ `ತಿಗಣೆಗಳು’ ಹಾಸ್ಯ ನಾಟಕ ಪ್ರದರ್ಶನ

ಮೈಸೂರು,ಸೆ.1-ಮೈಸೂರು ರಂಗವಲ್ಲಿ ತಂಡದ ವತಿಯಿಂದ ಸೆ.3 ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿಎಸ್.ಎನ್.ಕಿತ್ತೂರು ಅವರು ರಚಿಸಿರುವ ಮಧ್ಯರಾತ್ರಿಯ `ತಿಗಣೆಗಳು’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಆಕಾಶವಾಣಿಯ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ ಅವರ ನಿರ್ದೇಶನ ನಾಟಕಕ್ಕಿದೆ.

ವಠಾರವೊಂದರಲ್ಲಿ ಬಾಡಿಗೆಗೆ ಇರುವ ಬ್ರಹ್ಮಚಾರಿ ಯುವಕನಿಗೆ ಮನೆ ಮಾಲೀಕ ರಾತ್ರಿ ಸದ್ದು ಮಾಡಿದರೆ ಮನೆಯಿಂದ ಹೊರಹಾಕುವುದಾಗಿ ಎಚ್ಚರ ನೀಡಿರುತ್ತಾನೆ. ನಾಲ್ಕು ದಿನಗಳಿಂದ ಹಗಲು-ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ನಿದ್ರೆಗೆಟ್ಟು ಮನೆಗೆ ಬಂದು ಇನ್ನೇನು ಮಲಗಲು ಅಣಿಯಾಗುವಾಗ ಒಂದೊಂದು ನೆಪವೊಡ್ಡಿ ಬರುವ ನೆರೆಹೊರೆಯವರು ಆತನಿಗೆ ನಿದ್ರೆ ಬಾರದಂತೆ ತಿಗಣೆಗಳಾಗಿ ಕಾಡುವ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತವೆ.  

ಎಚ್.ಕೆ.ದ್ವಾರಕನಾಥ್ ಅವರ ವಿನ್ಯಾಸ, ಪ್ರಶಾಂತ್ ಹಿರೇಮಠ್ ಅವರ ಸಂಗೀತ ಸಂಯೋಜನೆ, ಸುಷ್ಮಾ ನಾಣಯ್ಯ ವಸ್ತ್ರವಿನ್ಯಾಸ, ರಾಘವೇಂದ್ರ ಬೂದನೂರು ಪ್ರಸಾದನ, ರಾಜೇಶ್ ತಲಕಾಡು ಬೆಳಕು, ಮಹೇಶ್ ನಂಜುಂಡಯ್ ಸಹಾಯ, ರಾಜೇಶ್ ನಿರ್ವಹಣೆ ನಾಟಕಕ್ಕಿದೆ. ಟಿಕೆಟ್ ಗಳಿಗಾಗಿ 9448871815 / 9964656482 ಸಂಪರ್ಕಿಸಬಹುದು. (ವರದಿ-ಎಂ.ಎನ್)

Leave a Reply

comments

Related Articles

error: