ಮೈಸೂರು

ವಿವಿಧ ಸೌಲಭ್ಯ ವಿತರಣೆಗಾಗಿ ಆಧಾರ್ ಮಾಹಿತಿ ಸಲ್ಲಿಸಲು ಸೂಚನೆ

ಮೈಸೂರು, ಸೆ.1 : ಮೈಸೂರು ನಗರ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಮೈತ್ರಿ, ಮತ್ತು ಅಂಗವಿಕಲ ವೇತನ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸಂಖ್ಯೆಯನ್ನು ಜಿಲ್ಲಾ ಖಜಾನೆ ವೇತನ ಬಟವಾಡೆಗೆ ನೊಂದಾಯಿಸಲಾಗುತ್ತಿದೆ.

ಮೈಸೂರು ನಗರ ಪ್ರದೇಶದಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ವೇತನ ಪಡೆಯುತ್ತಿರುವವರಲ್ಲಿ ಇಲ್ಲಿಯವರೆಗೆ ಆಧಾರ ದಾಖಲೆ ಮೈಸೂರು ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ನೀಡದ ಫಲಾನುಭವಿಗಳು ವೇತನ ಮಂಜೂರಾತಿ ಆದೇಶ ಪ್ರತಿ, ಎಂಓ ರಶೀತಿ, ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್ ಪುಸ್ತಕದ ನಕಲುಪ್ರತಿ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಿ, ಮೈಸೂರು ನಗರದ ನಜರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧ ತಾಲ್ಲೂಕು ಕಚೇರಿ ಕೊಠಡಿ ಸಂಖ್ಯೆ 5ರಲ್ಲಿ ನಗರದ ರಾಜಸ್ವ ನಿರೀಕ್ಷಕರಿಗೆ ಸೆಪ್ಟೆಂಬರ್ 10ರೊಳಗೆ ಸಲ್ಲಿಸುವುದು. ತಪ್ಪಿದ್ದಲ್ಲಿ ಮೈಸೂರು ನಗರದಲ್ಲಿ ವಾಸವಿರುವುದಿಲ್ಲವೆಂದು ವೇತನವು ಸ್ಥಗಿತವಾಗುವುದು ಎಂದು ಮೈಸೂರು ತಹಶೀಲ್ದಾರ್ ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: