ಪ್ರಮುಖ ಸುದ್ದಿ

ಪತ್ನಿಯನ್ನು ೭೨ ತುಂಡು ಮಾಡಿ ಹತ್ಯೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ

ಪ್ರಮುಖ ಸುದ್ದಿ, ಡೆಹರಾಡೂನ್, ಸೆ.೧: ಪತ್ನಿಯನ್ನು ಹತ್ಯೆಗೈದು ೭೨ ತುಂಡುಗಳಾಗಿ ಕತ್ತರಿಸಿದ್ದ ದೆಹಲಿ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ರಾಜೇಶ್ ಗೆ ಡೆಹರಾಡೂನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
೨೦೧೦ರಲ್ಲಿ ತನ್ನ ಪತ್ನಿ ಅನುಪಮಾ ಗುಲಟಿಯನ್ನು ಕೊಲೆ ಮಾಡಿ ದೇಹವನ್ನು ತುಂಡರಿಸಿ ಸಾಕ್ಷ್ಯ ನಾಶ ಮಾಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ರಾಜೇಶ್ ಗುಲಟಿಗೆ ಡೆಹರಾಡೂನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ೨೦೧೦ರ ಡಿಸೆಂಬರ್ ೧೧ರಂದು ಅನುಪಮಾ ಕಾಣೆಯಾಗಿರುವ ಕುರಿತು ಆಕೆಯ ಸಹೋದರ ಸುಜನ್ ಸ್ಥಳೀಯ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ರಾಜೇಶ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು. ೨೦೧೦ರ ಅಕ್ಟೋಬರ್ ೧೭ರ ರಾತ್ರಿ ಕೋಪದಲ್ಲಿ ತನ್ನ ಪತ್ನಿ ಅನುಪಮಾ(೩೩)ಳ ತಲೆಯನ್ನು ಗೋಡೆಗೆ ಜಜ್ಜಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದ.
ಅ.೧೮ರ ಬೆಳಗ್ಗೆ ಆಕೆಯ ದೇಹವನ್ನು ೭೨ ತುಂಡುಗಳಾಗಿ ಕತ್ತರಿಸಿ, ಯಾರಿಗೂ ಕಾಣದಂತೆ ಫ್ರೀಜರ್‌ನಲ್ಲಿ ದೇಹದ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದ. ಇಬ್ಬರು ಮಕ್ಕಳು ಹಾಗೂ ಸಂಬಂಧಿಕರು ಆಕೆಯ ಬಗ್ಗೆ ಕೇಳಿದಾಗಲೆಲ್ಲ, ಹೊರಗೆ ಹೋಗಿದ್ದಾಳೆ ಎನ್ನುವ ಉತ್ತರವಷ್ಟೇ ಸಿಗುತಿತ್ತು. ದಂಪತಿಯ ನಡುವೆ ಸಂಬಂಧದಲ್ಲಿ ಬಿರುಕು ಹಾಗೂ ರಾಜೇಶ್‌ನ ಎರಡನೇ ಮದುವೆ ಕೊಲೆಗೆ ಕಾರಣ ಎಂದು ಪೊಲೀಸರು ೩೫೦ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. (ವರದಿ ಬಿ.ಎಂ)

Leave a Reply

comments

Related Articles

error: