
ಮೈಸೂರು
ಕ್ರೀಡೆಯಲ್ಲಿ ಶಿಸ್ತನ್ನು ಪಾಲಿಸಲು ಎಂ.ಎಂ. ಸುರೇಶ್ ಚಂಗಪ್ಪ ಸಲಹೆ
ಮೈಸೂರು,ಸೆ.2:- ನಗರದ ರೋಟರಿ ಜಯಪ್ರಕಾಶ್ ನಗರ ಹಾಗೂ ಕರ್ನಾಟಕ ಹ್ಯಾಂಡ್ ಬಾಲ್ ಅಸೋಸಿಯೇಷನ್ ವತಿಯಿಂದ 15 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರಿಗೆ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಮೈಸೂರಿನ ಜೆ.ಪಿ ನಗರದಲ್ಲಿರುವ ಪುಟ್ಟರಾಜ ಗವಾಯಿ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗೆ ರೋಟರಿ ಜಿಲ್ಲಾ ರಾಜ್ಯಪಾಲ ಎಂ.ಎಂ. ಸುರೇಶ್ ಚಂಗಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದು ಹ್ಯಾಂಡ್ ಬಾಲ್ ಕ್ರೀಡೆ ಅಷ್ಟಾಗಿ ಪ್ರಸಿದ್ಧಿ ಪಡೆದಿಲ್ಲ. ಇಲ್ಲಿಗೆ ರಾಜ್ಯದ ವಿವಿಧ ಭಾಗಗಳಿಂದ 32 ತಂಡಗಳು ಬಂದಿವೆ. ಮೊದಲ ಬಾರಿಗೆ ಇಷ್ಟು ತಂಡಗಳು ಬಂದಿರುವುದನ್ನು ನೋಡಿರುವುದು ಖುಷಿಯ ವಿಚಾರ. ನೀವು ದೊಡ್ಡ ಕ್ರೀಡಾಪಟುಗಳಾಗಬೇಕಾದರೆ ಕ್ರೀಡೆಯಲ್ಲಿ ಶಿಸ್ತನ್ನು ಪಾಲಿಸಬೇಕು, ಕ್ರೀಡೆಯಲ್ಲಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳಬೇಕು. ಯಾವುದೂ ಸುಲಭವಾಗಿ ಸಾಧ್ಯವಿಲ್ಲ ಅದಕ್ಕಾಗಿ ಪ್ರತಿ ಕ್ಷಣವು ಕಷ್ಟಪಡಬೇಕು ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ 15 ವರ್ಷದೊಳಗಿನ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಸಿ.ಕೆ ಮಹೇಂದ್ರ, ಕಾರ್ಯದರ್ಶಿ ಎಂ.ಕೆ ನಾಗೇಂದ್ರ , ಮಾಜಿ ಮೇಯರ್ ಬಿ ಎಲ್ ಭೈರಪ್ಪ, ಅರ್. ರವೀಂದ್ರ ಭಟ್, ಪಿ.ವಿ ರಾಮದಾಸ್, ಕಾರ್ತಿಕ್, ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)