ಮನರಂಜನೆ

ಬರೋಬ್ಬರಿ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡ ನಟ ರಣವೀರ್ ಸಿಂಗ್..!

ಮುಂಬೈ,ಸೆ.2-ನಟ ರಣವೀರ್ ಸಿಂಗ್ ಗೆ ಹಿರಿಯ ನಟ ರಾಜಾ ಮುರಾದ 24 ಬಾರಿ ಕಪಾಳ ಮಾಡಿದ್ದಾರೆ. ಇದನ್ನು ಸ್ವತಃ ರಣವೀರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಕಪಾಳ ಮೋಕ್ಷ ಮಾಡುವಂತೆ ಪಾಪಾ ರಣವೀರ್ ಸಿಂಗ್  ಏನು ಮಾಡಿದರು ಎಂದು ಯೋಚಿಸುತ್ತಿದ್ದೀರಾ? ರಾಜಾ ಮುರಾದ್ ಹಾಗೂ ರಣವೀರ್ ಸಿಂಗ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೂ ಏಕೆ ಕಪಾಳ ಮೋಕ್ಷಾ ಮಾಡಿದ್ದಾರೆ ಎಂದು ಮುಂದೆ ಓದಿ.

ಪದ್ಮಾವತಿ ಚಿತ್ರದ ದೃಶ್ಯವೊಂದಕ್ಕಾಗಿ ರಾಜಾ ಮುರಾದ್ ಕಪಾಳ ಮೋಕ್ಷ ಮಾಡಿದ್ದಾರೆ. ಈ ದೃಶ್ಯ ನೈಜವಾಗಿ ಬರಬೇಕೆಂಬ ಕಾರಣಕ್ಕೆ ಅನೇಕ ಬಾರಿ ರಿಟೇಕ್ ತೆಗೆದುಕೊಳ್ಳಲಾಗಿದೆ. ಕೊನೆಗೂ ದೃಶ್ಯ ಓಕೆ ಆಗಿದೆ. ಆದ್ರೆ ಅಲ್ಲಿಯವರೆಗೆ ರಣವೀರ್ ಕೆನ್ನೆ ಕೆಂಪಗಾಗಿತ್ತಂತೆ. ಈ ಬಗ್ಗೆ ಪೇಪರ್ ಫೋಟೋವೊಂದನ್ನು ಹಾಕಿ ಪೇಪರ್ ನಲ್ಲಿ ಬಂದಿರುವ ಸುದ್ದಿ ಸತ್ಯ ಎಂದು ಟ್ವಿಟ್ ಮಾಡಿದ್ದಾರೆ.

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಸಂಜಯ್ ಲೀಲಾ ಬನ್ಸಾಲಿ, ರಾಜಾ ಮುರಾದ್ ಮೂರನೇ ಬಾರಿ ‘ಪದ್ಮಾವತಿ’ಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ಈ ಹಿಂದೆ ‘ರಾಮ್ ಲೀಲಾ’ ಹಾಗೂ ‘ಭಾಜಿರಾವ್ ಮಸ್ತಾನಿ’ಯಲ್ಲಿ ಕೆಲಸ ಮಾಡಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: