ಮೈಸೂರು

ಟಿಬೆಟ್‍ನ ಲಾರಂಗ್‍ಗಾರ್ ಮೇಲೆ ಚೀನಾ ದಾಳಿ ಖಂಡಿಸಿ ಪ್ರತಿಭಟನೆ

ಟಿಬೆಟಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಟಿಬೆಟ್‍ನ ಲಾರಂಗ್‍ಗಾರ್ ಮೇಲೆ ಚೀನಾ ಸರಕಾರ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘ ಹಾಗೂ ಟಿಬೆಟಿಯನ್ ಕಾಂಗ್ರೆಸ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು, ದೊಡ್ಡ ಗಡಿಯಾರ, ಗಾಂಧಿ ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಅರಸು ರಸ್ತೆ, ಜೆಲ್‍ಬಿ ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಸೆರ್ಟಾ ಲಾರಂಗ್ ಗಾರಿಗ್ ಬೌದ್ಧಿಕ ಅಕಾಡೆಮಿಯಲ್ಲಿ ಟಿಬೆಟ್‍ನ ವಿವಿಧ ಪ್ರದೇಶಗಳಿಂದ ಬಂದ ಬೌದ್ಧ ಭಿಕ್ಷುಗಳು ಹಾಗೂ ಸನ್ಯಾಸಿನಿಯರು ಅಭ್ಯಸಿಸುತ್ತಿದ್ದರು. ಜೊತೆಗೆ ಅದು ಬಲವಾದ ಧಾರ್ಮಿಕ ತತ್ವ ಹಾಗೂ ಉಪ ಭಾಷೆಯಾಗಿದ್ದು, ಅದರ ಅನುಯಾಯಿಗಳು ಪ್ರಪಂಚದಾದ್ಯಂತ ಖ್ಯಾತರಾಗಿದ್ದರಲ್ಲದೆ, ಬೌದ್ಧ ಧರ್ಮದ ತತ್ವ ಪ್ರಚಾರ ಮತ್ತು ಸಂಸ್ಕೃತಿ ಸಂರಕ್ಷಣೆಯಲ್ಲಿ ತೊಡಗಿದ್ದಾರೆ.. ಇದನ್ನು ಸಹಿಸದ ಚೀನಾ ಸರ್ಕಾರ ಅಲ್ಲಿನ ಧಾರ್ಮಿಕ ತರಬೇತಿ ಮಿತಿಗೊಳಿಸಿ, ಅಭ್ಯಸಿಸಲು ಆಗಮಿಸುವವರ ಸಂಖ್ಯೆಯನ್ನೂ ಕಡಿತಗೊಳಿಸಿದೆ. ಅಲ್ಲದೆ ಅವರನ್ನು ಹೊರ ಕಳಿಸುವ ಕೆಲಸ ನಡೆದು, ವಸತಿ ಗೃಹಗಳನ್ನು ಒಡೆದ ಬಳಿಕ ಈಗ ಅದನ್ನು ನಾಶಗೊಳಿಸಿ, ಅಲ್ಲಿದ್ದವರ ಸೆರೆಮನೆಯನ್ನಾಗಿಸುವ ಕೆಲಸ ಚೀನಾ ಸರ್ಕಾರ ಮಾಡಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘದ ಅಧ್ಯಕ್ಷೆ ತೆನ್‍ಜಿನ್ ಡೋಲ್ಯ, ಟಿಬೆಟಿಯನ್ ಕಾಂಗ್ರೆಸ್ ಉಪಾಧ್ಯಕ್ಷ ತೆನ್‍ಜೆನ್ ಲೋಡೇ, ಲೋಬ್ಸಂಗ್ ಕುಂಗಾ, ತೆನ್‍ಜೆನ್ ಲಾವೋ ಇದ್ದರು.

Leave a Reply

comments

Related Articles

error: