ಕರ್ನಾಟಕಸುದ್ದಿ ಸಂಕ್ಷಿಪ್ತ

ಕಿರುಸಾಲ ಯೋಜನೆಯಡಿ ಸಾಲ ಸೌಲಭ್ಯ : ಅರ್ಜಿ ಆಹ್ವಾನ

ಮಂಡ್ಯ, ಸೆ.2 : 2017-18ನೇ ಸಾಲಿನಲ್ಲಿ ಕಿರುಸಾಲ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು ಸಮಾಜದಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಪ್ರತಿ ಸ್ತ್ರೀಶಕ್ತಿ ಗುಂಪಿಗೆ ರೂ. 2 ಲಕ್ಷಗಳ ವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ನೀಡಲು ಅರ್ಹ ಸ್ತ್ರೀ ಶಕ್ತಿ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾಲ ಪಡೆಯುವ ಸ್ತ್ರೀಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಗುಂಪಿನ ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ/ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು. ಈಗಾಗಲೇ ಕಿರುಸಾಲ ಯೋಜನೆಯಡಿ ಪ್ರಯೋಜನೆ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ಸ್ತ್ರೀಶಕ್ತಿ ಗುಂಪು ಆರ್ಥಿಕವಾಗಿ ಸದೃಢವಾಗಿದ್ದು, ಗುಂಪಿನ ಉಳಿತಾಯ ಗರಿಷ್ಠ ರೂ.2 ಲಕ್ಷಗಳಿಗೂ ಮೇಲಿರಬೇಕು.

ಗುಂಪು ವ್ಯವಸ್ಥಿತ ರೀತಿಯಲ್ಲಿ ದಾಖಲೆಗಳನ್ನು ನಿರ್ವಹಿಸುತ್ತಿರಬೇಕು. ಸಾಲ ಅರ್ಜಿ ಹಾಕುವ ಸ್ತ್ರೀಶಕ್ತಿ ಗುಂಪು ತಾಲ್ಲೂಕು ಮಟ್ಟದ ಒಕ್ಕೂಟದಲ್ಲಿ ನೊಂದಾವಣಿಯಾಗಿದ್ದು, ಸದಸ್ಯತ್ವ ಹೊಂದಿರಬೇಕು ಹಾಗೂ ಅದರ ಪ್ರತಿಯನ್ನು ಹೊಂದಿರಬೇಕು ಅರ್ಹ ಸ್ತ್ರೀಶಕ್ತಿ ಗುಂಪುಗಳು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿಗಳನ್ನು ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಸೆಪ್ಟೆಂಬರ್ 20 ರೊಳಗೆ ತ್ರಿಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

-ಎನ್.ಬಿ.

Leave a Reply

comments

Related Articles

error: