ಮೈಸೂರು

ಯುವರಾಜ ಕಾಲೇಜಿನ ನೇಮಕಾತಿ ರದ್ದುಗೊಳಿಸಿ ಆದೇಶ

ಯುವರಾಜ ಕಾprincipalಲೇಜಿನಲ್ಲಿ ನೇಮಕಗೊಂಡಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಗಳನ್ನು ಮೈಸೂರು ವಿಶ್ವವಿದ್ಯಾನಿಲಯ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ.

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಕಳೆದ ಹದಿನೈದು ದಿನಗಳ ಹಿಂದಷ್ಟೇ 48 ಅಸಿಸ್ಟೆಂಟ್ ಪ್ರೊಫೆಸರ್ ಗಳನ್ನು ಐದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಮೈಸೂರು ವಿವಿಯ ಕುಲಸಚಿವ ಪೊ.ಆರ್.ರಾಜಣ್ಣ ಅವರನ್ನು ಬಿಡುಗಡೆಗೊಳಿಸಿದ ಅದೇಶದ ಪ್ರತಿಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ನಂಜೇಗೌಡರಿಗೆ ರವಾನಿಸಿದರು. ಕುಲಸಚಿವರ ಆದೇಶದ ಮೇರೆಗೆ ನೇಮಕಗೊಂಡಿದ್ದ ಪ್ರತಿಯೊಬ್ಬರನ್ನು ಬಿಡುಗಡೆಗೊಳಿಸಿದ್ದಾಗಿ ತಿಳಿಸಿದರು. ಸರ್ಕಾರದ ಅದೇಶವನ್ನು ಉಲ್ಲಂಘಿಸಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆನ್ನುವ ಆರೋಪವೂ ಪ್ರಾಂಶುಪಾಲ ಪ್ರೊ.ಹೆಚ್.ನಂಜೇಗೌಡರ ಮೇಲಿದ್ದು ಅವರನ್ನು ಮೈಸೂರು ವಿವಿಯ ಕುಲಸಚಿವ ಪ್ರೊ.ಸಿ.ಬಸವರಾಜು ಅಮಾನತುಗೊಳಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಅಮಾನತಿಗೆ ತಡೆಯಾಜ್ಞೆಯನ್ನು ಕೂಡ ನೀಡಿದೆ.

ಪ್ರೊ.ನಂಜೇಗೌಡ ನಿವೃತ್ತಿ: ನಾಗಮಂಗಲ ತಾಲೂಕಿನ ನಾಗತಿಹಳ್ಳಿಯವರಾದ ಪ್ರೊ.ನಂಜೇಗೌಡರು ಪ್ರಸ್ತುತ ಮೈಸೂರಿನ ಯುವರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದು ಅ.28ರಂದು ಸೇವೆಯಿಂದ ನಿವೃತ್ತರಾಗುವರು.

1976ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ ನಲ್ಲಿ 7ನೇ ರ್ಯಾಂಕ್, 78ರಲ್ಲಿ ಎಂ.ಕಾಂನಲ್ಲಿ ಚಿನ್ನದ ಪದಕ ಹಾಗೂ 1990ರಲ್ಲಿ ವೈಸೂರು ವಿವಿಯಿಂದ ಪಿ.ಹೆಚ್.ಡಿ.ಪದವಿ ಪಡೆದು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2013ರಿಂದ ಯುವರಾಜ ಕಾಲೇಜು ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು.ಸುದೀರ್ಘ 34 ವರ್ಷಗಳ ಸೇವೆ ಪೂರ್ಣಗೊಳಿಸಿದ ಇವರು ಅಕ್ಟೋಬರ್ 28ರಂದು ನಿವೃತ್ತಿಯಾಗುತ್ತಿದ್ದಾರೆ.

 

Leave a Reply

comments

Related Articles

error: