ಮೈಸೂರು

ಒರಿಸ್ಸಾದಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೈಸೂರಿನ ಯುವತಿ ಸಾವು

orissaಕೌಶಲಾಭಿವೃದ್ಧಿ ತರಬೇತಿಗೆ ತೆರಳಿದ್ದ ಮೈಸೂರಿನ ವಿದ್ಯಾರ್ಥಿನಿಯೊಬ್ಬರು ಒರಿಸ್ಸಾದಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ.

ಮೈಸೂರಿನ ಗೋಕುಲಂನ 2ನೇ ಹಂತದ ನಿವಾಸಿ ಬ್ಯಾಂಕ್ ಉದ್ಯೋಗಿಯಾಗಿರುವ ಶಂಕರ್ ಅವರ ಪುತ್ರಿ ಎನ್. ಮಾನಸ(22) ಮೃತ ಯುವತಿ. ಬಿಇ ಶಿಕ್ಷಣ ಮುಗಿಸಿದ್ದ ಮಾನಸ ಅವರಿಗೆ ಕ್ಯಾಂಪಸ್‍ ಸೆಲೆಕ್ಷನ್‍ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಆ ಕಂಪನಿ ಮೂಲಕವೇ ತರಬೇತಿಗಾಗಿ ಒರಿಸ್ಸಾಗೆ ತೆರಳಿದ್ದರು. ಸ್ನೇಹಿತರೊಂದಿಗೆ ಕಡಲ ತೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮಾನಸರನ್ನು ರಕ್ಷಿಸಲು ಹೋದ ಸ್ನೇಹಿತರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ ನಾಲ್ಕು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

comments

Related Articles

error: