ದೇಶಪ್ರಮುಖ ಸುದ್ದಿ

ಕೇಂದ್ರ ಸಂಪುಟ ವಿಸ್ತರಣೆ : ಕರ್ನಾಟಕದ ಅನಂತ್ ಕುಮಾರ್ ಹೆಗಡೆಗೆ ಒಲಿದ ಅವಕಾಶ

ನವದೆಹಲಿ, ಸೆ.3 (ಪ್ರಮುಖ ಸುದ್ದಿ) : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವನ್ನು ಇಂದು ವಿಸ್ತರಿಸಲಾಗಿದೆ. ಕರ್ನಾಟಕದ ಉತ್ತರಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಅವರೂ ಸೇರಿದಂತೆ ಒಟ್ಟು 9 ಮಂದಿ ನೂತನ ಸಚಿವರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಹಾಲಿ ಸಚಿವರಾಗಿದ್ದ ನಾಲ್ಕು ಮಂದಿ ರಾಜ್ಯ ಸಚಿವರಿಗೆ ಕ್ಯಾಬಿನೆಟ್‍ ದರ್ಜೆಗೆ ಭಡ್ತಿ ನೀಡಲಾಗಿದ್ದು, ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿಯೂಷ್ ಗೋಯಲ್ ಅವರು ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದ ಸಚಿವರು. ಈ ನಾಲ್ಕೂ ಸಚಿವರು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಮತ್ತೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು. ಭಾರತೀಯ ಸೇನೆಯ ಮೂರು ದಳಗಳ ಮುಖ್ಯಸ್ಥರೂ ಹಾಜರಿದ್ದರು.

ಇಂದು ಪ್ರಮಾಣ ವಚನ ಸ್ವೀಕರಿಸಿರುವ 9 ಮಂದಿ ನೂತನ ಸಚಿವರಿಗೆ ರಾಜ್ಯ ದರ್ಜೆಯ ಸಚಿವ ಸ್ಥಾನ ನೀಡಲಾಗಿದ್ದು, ನೂತನ ರಾಜ್ಯ ದರ್ಜೆ ಸಚಿವರ ಪಟ್ಟಿ ಹೀಗಿದೆ :
ನೂತನ ರಾಜ್ಯ ದರ್ಜೆ ಸಚಿವರು :
ಅನಂತ್ ಕುಮಾರ್ ಹೆಗಡೆ, ರಾಜ್ ಕುಮಾರ್ ಸಿಂಗ್, ಸತ್ಯಪಾಲ್ ಸಿಂಗ್, ಆಲ್ಫೋನ್ಸ್ ಕಣ್ಣನ್ತಾಿನಮ್, ಹರ್‍‍ದೀಪ್ಸಿಂ ಗ್‍ ಪೂರಿ, ಗಜೇಂದ್ರ ಸಿಂಗ್‍ ಶೆಖಾವತ್, ಅಶ್ವಿನಿ ಕುಮಾರ್ ಚೌಬಿ, ಶಿವಪ್ರತಾಪ್ ಶುಕ್ಲಾ, ವೀರೇಂದ್ರ ಕುಮಾರ್.
  • ರಾಜ್ಯ ಸಚಿವರು ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಲೋಕಸಭೆ ಕ್ಷೇತ್ರ, ಕರ್ನಾಟಕ)
  • ಶಿವಪ್ರತಾಪ ಶುಕ್ಲಾ (ರಾಜ್ಯಸಭೆ ಸದಸ್ಯ, ಉತ್ತರ ಪ್ರದೇಶ)
  • ಅಶ್ವಿನಿಕುಮಾರ್ ಚೌಬೆ (ಬಕ್ಸರ್ ಲೋಕಸಭೆ ಕ್ಷೇತ್ರ, ಬಿಹಾರ)
  • ವೀರೇಂದ್ರಕುಮಾರ್ (ಟಿಕಮ್ಗಡ ಲೋಕಸಭೆ ಕ್ಷೇತ್ರ, ಮಧ್ಯಪ್ರದೇಶ)
  • ರಾಜಕುಮಾರ್ ಸಿಂಗ್ (ಅರಾ, ಲೋಕಸಭೆ ಕ್ಷೇತ್ರ, ಬಿಹಾರ)
  • ಹರದೀಪ್ ಸಿಂಗ್ ಪುರಿ (ನಿವೃತ್ತ ಐಎಫ್‌ಎಸ್ ಅಧಿಕಾರಿ, ಪಂಜಾಬ್)
  • ಗಜೇಂದ್ರ ಸಿಂಗ್ ಶೆಖಾವತ್ (ಜೋಧಪುರ, ಲೋಕಸಭೆ, ರಾಜಸ್ಥಾನ)
  • ಸತ್ಯಪಾಲ್ ಸಿಂಗ್ (ಬಾಗಪತ್, ಲೋಕಸಭೆ ಕ್ಷೇತ್ರ, ಉತ್ತರ ಪ್ರದೇಶ)
  • ಅಲ್ಫೋನ್ಸ್ ಕಣ್ಣನ್ ದಾನಮ್ (ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಸಕ್ರಿಯ ಸದಸ್ಯ, ಕೇರಳ)
ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದ ಸಚಿವರು :
ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದವರು : ಪಿಯೂಷ್ ಗೋಯಲ್, ಮುಕ್ತಾರ್ ಅಬ್ಬಾಸ್ ನಖ್ವಿ, ನಿರ್ಮಲಾ ಸೀತಾರಾಮನ್‍, ಧರ್ಮೇಂದ್ರ ಪ್ರಧಾನ್.

Leave a Reply

comments

Related Articles

error: