ಮೈಸೂರು

ಬೈಲಕುಪ್ಪೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಸರ್ಕಾರದಿಂದ ಕೊಟ್ಟಿರುವ ಸೈಕಲ್‌ಗಳನ್ನು ಮಕ್ಕಳು ಸದುಪಯೋಗ ಪಡಿಸಕೊಳ್ಳಬೇಕು ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕವಿತ ಅವರು ಹೇಳಿದರು. ಅವರು ಬೈಲಕುಪ್ಪೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಿ ಮಾತನಾಡಿದರು. ನಂತರ ಗ್ರಾ.ಪಂ. ಸದಸ್ಯ ಎಚ್.ಎ. ಮಂಜುನಾಥ್ ಅವರು ಮಾತನಾಡಿ, ಸರ್ಕಾರದಿಂದ ನೀಡುವ ಸೈಕಲ್‌ಗಳನ್ನು ವಿದ್ಯಾರ್ಥಿಗಳು ಮಾತ್ರ ಬಳಸಬೇಕು. ಪೋಷಕರು ಮನೆಬಳಕೆಯ ಹುಲ್ಲು-ಹೊರೆ ಸಾಗಿಸುವುದಕ್ಕೆ, ಗೊಬ್ಬರದ ಮೂಟೆಗಳನ್ನು ಜಮೀನಿಗೆ ಕೊಂಡೋಯ್ಯವುದಕ್ಕೆ ಎಂದಿಗೂ ಬಳಸಬಾರದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಎಂ.ಬಿ. ಮಂಜುನಾಥ್, ರಾಮು.ಜಿ, ಯಶೋಧ, ಅನಿತಾ ಶ್ಯಾಮ್ ಹಾಗೂ ಸಹಶಿಕ್ಷಕರು, ಸೇರಿದಂತೆ ಪ್ರಮುಖರು ಹಾಜರಿದ್ದರು.

Leave a Reply

comments

Related Articles

error: