ಮೈಸೂರು

ಇಂದು ಉದಯ ಟಿವಿ ಹರಟೆ ಕಾರ್ಯಕ್ರಮ: ಉಚಿತ ಪ್ರವೇಶ

ಮೈಸೂರಿಗರಿಗೆ ಹರಟೆ ಹೊಡೆಯೋದಕ್ಕೆ ಸದವಕಾಶ ಒದಗಿಬಂದಿದೆ. ಜೀವನಾನುಭವಕ್ಕೆ ಹಾಸ್ಯದ ಲೇಪನ ಹಚ್ಚಿ ಸಂವಾದಕ್ಕೆ ಅವಕಾಶ ಮಾಡಿಕೊಟ್ಟು ಮನೆ ಮಾತಾಗಿರುವ ಉದಯ ಟಿ.ವಿ.ಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಹರಟೆ ಕಾರ್ಯಕ್ರಮ ದೀಪಾವಳಿ ಹಬ್ಬದ ಪ್ರಯುಕ್ತ ಇಂದು (ಅ.26, ಬುಧವಾರ) ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮ ಆಯೋಜನೆಯ ಕುರಿತು ಮುಂಚಿತವಾಗಿ ತಿಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಕಡೇ ಯಾವುದೇ ಪ್ರವೇಶ ಪಾಸ್ ನಿಗದಿಪಡಿಸಿಲ್ಲ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮಾತ್ರವಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹರಟೆ ಕಾರ್ಯಕ್ರಮ ವೀಕ್ಷಿಸಿ ಯಶಸ್ವಿಗೊಳಿಸಬೇಕಾಗಿ ಉದಯ ಟಿವಿ ವ್ಯವಸ್ಥಾಪಕರು ಕೋರಿದ್ದಾರೆ.

Leave a Reply

comments

Related Articles

error: