ಕರ್ನಾಟಕ

ನೂರು ಅಡಿ ದಾಟಿದ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ

ರಾಜ್ಯ(ಮಂಡ್ಯ)ಸೆ.4:- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದೆ.
124.80 ಗರಿಷ್ಟ ಅಡಿ ಎತ್ತರದ  ಕೆ.ಆರ್.ಎಸ್. ಜಲಾಶಯದಲ್ಲಿ ಕಳೆದ ಮೂರು ವರ್ಷಗಳಿಂದ  ನೀರಿಲ್ಲದೆ  ಜಿಲ್ಲೆಯ ಜನರು ಸಂಕಷ್ಟ ಪಡುತ್ತಿದ್ದರು. ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ  ಜಲಾಶಯ ತುಂಬವ ನಿರೀಕ್ಷೆಯಿದೆ.ಜಲಾಶಯದ ನೀರಿನ ಮಟ್ಟ ನೂರರ ಗಡಿ ದಾಟುತ್ತಿದ್ದಂತೆ ಜಿಲ್ಲೆಯಲ್ಲಿ  ಕೃಷಿ ಚಟುವಟಿಕೆ ಚುರುಕುಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: