
ಕರ್ನಾಟಕ
ಲಾರಿ ಹಾಗೂ ಟಂಟಂ ಡಿಕ್ಕಿ:ಮೂವರ ಸಾವು
ರಾಯಚೂರು,ಸೆ.4: ಲಾರಿ ಹಾಗೂ ಟಂಟಂ ವಾಹನಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಉಮಲೂಟಿ ಗ್ರಾಮದ ಬಳಿ ನಡೆದಿದೆ.
ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ ಮೌಲಪ್ಪ(40), ಗಣಪತಿ ಮತ್ತು ಬಾಲಪ್ಪ ಎಂಬ ಮೃತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಟಂಟಂನಲ್ಲಿದ್ದ 10 ಕುರಿಗಳು ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. (ವರದಿ: ಪಿ.ಜೆ)