ಮೈಸೂರು

1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಛಾವಣಿಯಿಂದ ಮನೆ ಒಳಗೆ ಇಳಿದ ಕಳ್ಳರು ಸುಮಾರು 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ.

ಮೈಸೂರಿನ ಉದಯಗಿರಿಯ ಇಡಬ್ಲ್ಯುಎಸ್ ಮನೆಯ ನಿವಾಸಿ ಅಸ್ಲಾಂ ಪಾಷಾ ಮನೆಯವರು ಹೊರಗೆ ಹೋಗಿದ್ದಾಗ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಪಾಷಾ ಅವರು ಮನೆಗೆ ವಾಪಸ್ ಬಂದಾಗ ಬೆಡ್‍ ರೂಂನಲ್ಲಿರುವ ಬೀರುವಿನ ಬಾಗಿಲು ಮೀಟಿ ಲಾಕರ್‍ನಲ್ಲಿದ್ದ 35 ಗ್ರಾಂನ ಸರ, 30 ಗ್ರಾಂನ ನೆಕ್ಲೇಸ್, 25 ಗ್ರಾಂನ ಹಾರವೊಂದನ್ನು ಕಳವು ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Leave a Reply

comments

Related Articles

error: