ಪ್ರಮುಖ ಸುದ್ದಿ

ಗೆಳೆಯರಿಂದಲೇ ಸ್ನೇಹಿತನ ಹತ್ಯೆ

ಪ್ರಮುಖ ಸುದ್ದಿ, ಬಳ್ಳಾರಿ, ಸೆ.೪: ಯುವಕನೊಬ್ಬ ತನ್ನ ಗೆಳೆಯರಿಂದಲೇ ಹತ್ಯೆಗೀಡಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಶಿವ ಆಲಿಯಾಸ್ ಶಿವಲಿಂಗ ನಾಯಕ(೨೪) ಹತ್ಯೆಯಾದ ಯುವಕ. ಈತ ಗಡಂಗ ಬೀದಿಯ ನಿವಾಸಿಯಾಗಿದ್ದು, ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಿಕೊಂಡು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಜತೆಯಾಗಿ ಕುಡಿಯುವ ಚಟ ಹೊಂದಿರುವ ಗೆಳೆಯರೂ ಇದ್ದು, ಗೆಳೆಯರೊಂದಿಗೆ ಅಪಾಪೋಲಿಯಾಗಿ ತಿರುಗುತ್ತ, ಸಣ್ಣಪುಟ್ಟ ರೌಡಿಸಂ ಮತ್ತು ಕಳ್ಳತನ ಮಾಡಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ರೇಡಿಯೋ ಪಾರ್ಕ್ ಬಳಿಯ ಸರ್ಕಾರಿ ಐಟಿಐ ಆವರಣದಲ್ಲಿ ಗೆಳೆಯರೊಂದಿಗೆ ಬಂದಾಗ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಅವನ ಸ್ನೇಹಿತರು ತಲೆಯ ಮೇಲೆ ದೊಡ್ಡದೊಂದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಹತ್ಯೆಗೆ ಕಾರಣರಾದವರ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: