ಕರ್ನಾಟಕಪ್ರಮುಖ ಸುದ್ದಿ

ಮೈಸೂರು ಮಹಾರಾಜರ ಕುರಿತು ಸಿಎಂ ಏಕವಚನ ಪ್ರಯೋಗ : ಮಂಡ್ಯದಲ್ಲಿ ಪ್ರತಿಭಟನೆ

ರಾಜ್ಯ(ಮಂಡ್ಯ)ಸೆ.4:-  ಮೈಸೂರು ಮಹಾರಾಜರ ಕುರಿತು ಮುಖ್ಯಮಂತ್ರಿ  ಸಿದ್ದರಾಮಯ್ಯ ಏಕ ವಚನ ಪ್ರಯೋಗ ಹಿನ್ನಲೆಯಲ್ಲಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಿನೂತನ ಪ್ರತಿಭಟನೆ ನಡೆಸಿದರು.
ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ  ಜಮಾಯಿಸಿದ ಪ್ರತಿಭಟನಾಕಾರರು ಬೋರ್ಡ್ ಬಳಸಿ ಏಕ ವಚನದಿಂದ ಬಹುವಚನ‌ ಪಾಠ ಮಾಡಿ  ಅಣಕಿಸಿದರು.  ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ  ಬಹುವಚನ ಪಾಠ ಹೇಳಿಕೊಟ್ಟರು. ಸದನದಲ್ಲಿ ಮತ್ತು ತಾವು ಓದಿದ ಶಾಲೆಯಲ್ಲಿ ಪಾಠ ಮಾಡುವ ಸಿ.ಎಂ. ಮೊದಲು ಕನ್ನಡ ವ್ಯಾಕರಣದ ಏಕ ವಚನ ಬಹುಚನ ಕಲಿಯಲಿ ಎಂದು ವ್ಯಂಗ್ಯವಾಡಿದರು. ಜನಸೇವೆ ಮತ್ತು‌ ಜನಾನುರಾಗಿಯಾಗಿದ್ದ ಮೈಸೂರು ಮಹಾರಾಜರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು  ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: