ಕ್ರೀಡೆಪ್ರಮುಖ ಸುದ್ದಿಮೈಸೂರು

ಅರಮನೆ ವೀಕ್ಷಿಸಿ ಬೆರಗಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ

ಮೈಸೂರು,ಸೆ.4-ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಮೈಸೂರು ಅರಮನೆಗೆ ಭೇಟಿ ನೀಡಿ ಅರಮನೆ ವೀಕ್ಷಿಸಿದರು. ಕ್ರಿಕೆಟ್ ಗೆಳೆಯರೊಂದಿಗೆ ಮೈಸೂರು ಅರಮನೆ ವೀಕ್ಷಿಸಿದ ಬ್ರೇಟ್ ಲೀ ಅರಮನೆಯ ಸೊಬಗನ್ನು ಕಂಡು ಬೆರಗಾಗಿದ್ದಾರೆ.

ಮೈಸೂರಿನಲ್ಲಿ ಕೆಪಿಎಲ್ ಪಂದ್ಯಾವಳಿ ನಡೆಯುತ್ತಿರುವುದರಿಂದ ಮೈಸೂರಿಗೆ ಆಸ್ಟ್ರೇಲಿಯ ಕ್ರಿಕೆಟಿಗ ಬ್ರೇಟ್ ಲಿ ಆಗಮಿಸಿದ್ದು, ಆಸ್ಟ್ರೇಲಿಯನ್ ವೇಗಿ ಇಂದು ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆಯೋ ಬಿಜಾಪುರ್ ಬುಲ್ಸ್, ಮೈಸೂರು ವಾರಿಯರ್ಸ್ ನಡುವಿನ ಪಂದ್ಯದ ವೀಕ್ಷಕ ವಿವರಣೆ ನೀಡಲಿದ್ದಾರೆ.

ಬ್ರೇಟ್ ಲೀ ಅವರೊಂದಿಗೆ ಆಸ್ಟ್ರೇಲಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಕೂಡ ಅರಮನೆ ವೀಕ್ಷಿಸಿದರು. ಅರಮನೆ ಸಫಾರಿ ಆನೆ ರೂಬಿಯಿಂದ ಆಶೀರ್ವಾದ ಪಡೆದು, ಆನೆಯೊಂದಿಗೆ ಫೋಟೋ ತೆಗೆಸಿಕೊಂಡರು. ಇನ್ನೂ ಆನೆಗಳಿಂದ ಆಶೀರ್ವಾದ ಪಡೆದ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಒಂದು ಒಳ್ಳೆಯ ಅನುಭವ. ಮೈಸೂರು ಅರಮನೆ ಸುಂದರ ಅರಮನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರೇಟ್ ಲೀ ಅಸ್ಟ್ರೇಲಿಯಾ ತಂಡದ ಖ್ಯಾತ ಬೌಲರ್ ಆಗಿದ್ದರು. (ವರದಿ-ಎಸ್.ಎನ್, ಆರ್.ವಿ, ಎಂ.ಎನ್)

 

 

 

 

Leave a Reply

comments

Related Articles

error: