ಮೈಸೂರು

ಸೈಕಲ್ ಫ್ಯೂರ್ ಅಗರಬತ್ತೀಸ್ ಸಂಸ್ಥಾಪಕರ ದಿನಾಚರಣೆ

ಮೈಸೂರಿನಲ್ಲಿ ಸೈಕಲ್ ಫ್ಯೂರ್ ಅಗರಬತ್ತೀಸ್ ಸಂಸ್ಥಾಪಕ ಎನ್.ಆರ್.ರಂಗರಾವ್ ಅವರ ಜನ್ಮದಿನವನ್ನು ಅಜಿತ್ ನೆಲೆ ಅನಾಥಾಶ್ರಮದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುವ ಮೂಲಕ ಆಚರಿಸಲಾಯಿತು.

ಜನ್ಮದಿನೋತ್ಸವ ಆಚರಣೆಯು ಎನ್.ಆರ್.ಸಮೂಹ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸ್ಂಸ್ಥೆಯ ಪ್ರೇರೇಪಣಾ ಯೋಜನೆಗೆ ಸಾಕ್ಷಿಯಾಯಿತು. ಪ್ರೇರೇಪಣಾ ಎರಡು ಹಂತದ ಯೋಜನೆಯಾಗಿದ್ದು ಕೊಳಗೇರಿ ನಿವಾಸಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ತಿಳಿಸುವುದು, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡುವುದು, ಮದ್ಯವ್ಯಸನದಿಂದ ಅವರನ್ನು ಮುಕ್ತಗೊಳಿಸುವುದು, ಇಡೀ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಯೋಜನೆಯನ್ನು ಒಳಗೊಂಡಿದೆ.

ಸೈಕಲ್ ಫ್ಯೂರ್ ಅಗರ್ ಬತ್ತೀಸ್ ಆಡಳಿತ ನಿರ್ದೇಶಕ ಅರ್ಜುನ್  ರಂಗಾ ಮಾತನಾಡಿ ಮುಗ್ಧ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ. ಅವರ ಮುಖದಲ್ಲಿ ಕಂಡ ಹರ್ಷ ನಿಜಕ್ಕೂ ಅರ್ಥಪೂರ್ಣವಾದದ್ದು ಎಂದರು.

Leave a Reply

comments

Related Articles

error: