ಮೈಸೂರು

ಎರಡು ದಿನಗಳ ವಿಚಾರ ಸಂಕಿರಣ

ಮೈಸೂರಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ವತಿಯಿಂದ ‘ ಟೀಚಿಂಗ್ & ಟೆಸ್ಟಿಂಗ್ ಆಫ್ ಡಿಡೆಕ್ಟಿಕ್ ಲಿಟ್ರೆಚರ್ ಇನ್ ತಮಿಳ್ ‘ವಿಷಯದ ಮೇಲೆ ಎರಡು ದಿನಗಳ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

ತಮಿಳುನಾಡಿನಿಂದ ಸುಮಾರು 30 ಶಿಕ್ಷಕರು, ಸಂಶೋಧಕರು ಪಾಲ್ಗೊಂಡಿದ್ದರು. ಪಾಂಡಿಚೇರಿ ಮತ್ತು ಕರ್ನಾಟಕ ರಾಜ್ಯದ ಚಿಂತಕರು ವಿವಿಧ ವಿಷಯಗಳನ್ನು ಮಂಡಿಸಿದರು. ತಮಿಜ್ಹಾಗ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಶನ್ & ರಿಸರ್ಚ್ ಅಕಾಡಮಿಯ ಪ್ರೊ. ಪಿ. ರತ್ನಸಭಾಪತಿ ಮಾತನಾಡಿ, ಶಿಕ್ಷಕರಿಂದ ಉತ್ತಮ ಕಾರ್ಯ ನಿರ್ವಹಣೆಯಾಗಬೇಕು. ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಹಾಗಿದ್ದಾಗ ಮಾತ್ರ ಉತ್ತಮ ಫಲಿತಾಂಶ ನೀರೀಕ್ಷಿಸಲು ಸಾಧ್ಯ. ದೇಶದ ಶಿಕ್ಷಣ ಪದ್ಧತಿಯಲ್ಲೂ ಸುಧಾರಣೆ ಕಂಡುಬರಲಿದೆ ಎಂದರು.

ವೇದಿಕೆಯಲ್ಲಿ ಎನ್.ಟಿ.ಎಸ್.ನ ಮಾಜಿ ಮುಖ್ಯಸ್ಥ ಡಾ. ಎಂ. ಬಾಲಕುಮಾರ್, ಡಾ. ಬೀರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: