ಮೈಸೂರು

ಅ.27: ಜೆಎಸ್ಎಸ್ ಆಸ್ಪತ್ರೆಯಲ್ಲಿ ‘ಆರೋಗ್ಯಕ್ಕಾಗಿ ಅರಿವು’

‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ ಹಿನ್ನೆಲೆಯಲ್ಲಿ ಜಿಎಸ್‍ಎಸ್‍ ಆಯುರ್ವೇದ ಆಸ್ಪತ್ರೆಯು ಅ.27 ರಿಂದ ಎರಡು ದಿನಗಳ ‘ಆರೋಗ್ಯಕ್ಕಾಗಿ ಅರಿವು’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಧನ್ವಂತರಿ ದಿನಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಯುರ್ವೇದ ಮತ್ತು ಡಯಾಬಿಟಿಸ್ ಸಂಬಂಧಿತ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಲಲಿತಾದ್ರಿಪುರದಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದ್ದು, ತಪಾಸಣೆ ಶಿಬಿರ ಕೂಡ ಆಯೋಜಿಸಲಾಗಿದೆ.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ‘ಆರೋಗ್ಯಕ್ಕಾಗಿ ಅರಿವು’ ಕಾರ್ಯಕ್ರಮವನ್ನು ಅ.27 ರಂದು 11 ಗಂಟೆಗೆ ಉದ್ಘಾಟಿಸಲಿದ್ದು, ಜೆಎಸ್‍ಎಸ್‍ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಆರ್‍. ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭ ‘ಆಯುರ್ವೇದ ಮತ್ತು ಡಯಾಬಿಟಿಸ್ ನಿಯಂತ್ರಣ’ ಎಂಬ ವಿಷಯದ ಮೇಲೆ ಡಾ. ಜಾವೇದ್ ನಯೀಮ್, ಡಾ. ಆಂಜನೇಯ ಮೂರ್ತಿ ಮತ್ತು ಡಾ. ಪ್ರಶಾಂತ್ ಗೋಖಲೆ ಅವರೊಂದಿಗೆ ಚರ್ಚೆ ಕೂಡ ನಡೆಯಲಿದೆ.

ಅ.27ರಂದು ಮಧ್ಯಾಹ್ನ 1 ಗಂಟೆಗೆ ‘ಮಧುಮೇಹ ವಿರೋಧಿ ಅಡುಗೆ ಸ್ಪರ್ಧೆ’ ನಡೆಯಲಿದೆ. ಇದರಲ್ಲಿ ಬಾಗವಹಿಸಲು ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ 9741160800, 9945616590, 9620446892, 9060645300 ಸಂಪರ್ಕಿಸಬಹುದು.

Leave a Reply

comments

Related Articles

error: