ಕ್ರೀಡೆಮೈಸೂರು

ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಮೈಸೂರು,ಸೆ.4:- ಮೈಸೂರಿನ ಮಾನಸ ಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಆರನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಸೋಮವಾರ ಸಾಯಂಕಾಲ ಚಾಲನೆ ನೀಡಲಾಯಿತು. ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು.

ಮೈಸೂರು ವಾರಿಯರ್ಸ್ ತಂಡ ಬ್ಯಾಟಿಂಗ್ ಆಯ್ಕೆ  ಮಾಡಿಕೊಂಡಿದೆ. ಮೈಸೂರು ವಾರಿಯರ್ಸ್  ತಂಡದಿಂದ ನಾಯಕ ಕರುಣ್ ನಾಯರ್ ಹಾಗೂಅರ್ಜುನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದಾರೆ. ಮೈಸೂರು ವಾರಿಯರ್ಸ್ ಗೆ ತವರು ನೆಲದಲ್ಲಿ ಮೊದಲ ಪಂದ್ಯವಾಗಿದ್ದು, ವಿಕೆಟ್ ನಷ್ಟವಿಲ್ಲದೇ ಮೂರು ಓವರ್ ಅಂತ್ಯಕ್ಕೆ 18 ರನ್ ಗಳಿಸಿ ಉತ್ತಮ ಆರಂಭ ಮಾಡಿದೆ. ಬಿಜಾಪುರ ಬುಲ್ಸ್ ಬೌಲಿಂಗ್ ಮಾಡುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: