ಕರ್ನಾಟಕ

ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ : ಸಚಿವ ತನ್ವೀರ್ ಸೇಠ್

ಬೆಂಗಳೂರು, ಸೆ.4 (ಪ್ರಮುಖ ಸುದ್ದಿ):  ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ 1,000 ಶಾಲೆಗಳಲ್ಲಿ 2017-18 ನೇ ಸಾಲಿನಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ತಿಳಿಸಿದರು.

ಅವರು ಶಿಕ್ಷಕರ ಸದನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, “ವಿಶ್ವಾಸ ಕಿರಣ” ಕಾರ್ಯಕ್ರಮದಡಿ ಒಂಭತ್ತು ಮತ್ತು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗಗಳ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಪಡಿಸಲು ದಸರಾ ರಜೆ ಮತ್ತು ಭಾನುವಾರ ರಜೆ ದಿನಗಳಲ್ಲಿ ಇಂಗ್ಲೀಷ್, ಗಣಿತ ಮತ್ತು ಇತರೆ ವಿಷಯಗಳಲ್ಲಿ ವಿಶೇಷ ಬೋಧನಾ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.

ನೀಟ್ ಆಧಾರಿತ “ಗುರು ಚೇತನಾ” ಕಾರ್ಯಕ್ರಮದಡಿ 2017-18ನೇ ಸಾಲಿನಲ್ಲಿ 50,000 ಶಿಕ್ಷಕರುಗಳಿಗೆ ಅವರ ಆಯ್ಕೆಯ ಯಾವುದೇ ಎರಡು ವಿಷಯಗಳ ಮೇಲೆ ತಲಾ ಐದು ದಿನಗಳಂತೆ ಒಟ್ಟು 10 ದಿನಗಳ ತರಬೇತಿ ನೀಡಲಿದ್ದು, ಸದ್ಯದಲ್ಲೇ ಈ ಕಾರ್ಯಕ್ರಮ ಜಾರಿಯಾಗಲಿದೆ ಎಂದರು.

-ಎನ್.ಬಿ.

Leave a Reply

comments

Related Articles

error: