ಪ್ರಮುಖ ಸುದ್ದಿಮೈಸೂರು

ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೇಲೆ ಯುವಕರ ಮೇಲೆ ಶಿಸ್ತು ಕ್ರಮ : ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಎಚ್ಚರಿಕೆ

ಮೈಸೂರು,ಸೆ.5:- ಬಿಜೆಪಿ ಯುವ ಮೋರ್ಚಾ ಸೆ. 6 ರಂದು ಮೈಸೂರು ಕೋಟೆ ಆಂಜನೇಯ ದೇವಸ್ಥಾನದಿಂದ ಬೈಕ್ ರ್ಯಾಲಿಗೆ ಅವಕಾಶ ಕೇಳಿದ್ದು,ಆದರೆ ಪತ್ರ ಗಮನಿಸಿದಾಗ ಅವರು ತೆರಳುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಂಶಗಳು ಕಂಡಿವೆ.ಈ ಬಗ್ಗೆ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ. ಅದಕ್ಕೆ ಸರಿಯಾದ ಉತ್ತರ ಬಂದಿಲ್ಲ ಅದಕ್ಕೆ ಅವಕಾಶ ನೀಡಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಕರ್ನಾಟಕ ಪೊಲೀಸ್ ಆಕ್ಟ್ 1963 , 33, 34 ಅಧಿನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸೆ.6ರ ಬೆಳಿಗ್ಗೆ 6 ರಿಂದ ಸೆ.8 ಬೆಳಿಗ್ಗೆ 6 ರವರೆಗೆ ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರಲಿದೆ. 1000 ಬೈಕ್ ಒಂದೇ ಭಾರಿ ರಸ್ತೆಗೆ ಇಳಿಯುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಇದರ ಬಗ್ಗೆ ಮುಖಂಡರು ಜವಾಬ್ದಾರಿ ತೆಗೆದುಕೊಂಡಿಲ್ಲ. ಹಿಂದೆ ಕೂಡ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ ಎಂದರು.
ಮೈಸೂರು ಪೊಲೀಸ್  ಬಲ 3000 ಇದೆ. 1000 ಸಾವಿರ ಬೈಕ್ ತಡೆಯೋದು ಕಷ್ಟ ಆಗಲ್ಲ. ಆದಾಗ್ಯೂ ಆಗುವ ತೊಂದರೆಗೆ ಮುಖ್ಯಸ್ಥರೇ ಹೊಣೆ ಆಗುತ್ತಾರೆ. ಬೈಕ್ ಮೇಲೆ ಪ್ರಕರಣ, ಯುವಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಆಯೋಜಕರ ಮೇಲೆ ಐಟಿಗೆ ಕೂಡ ದೂರು ಕೊಡಲಾಗುತ್ತದೆ. ಬಂಧಿಸಿದವರನ್ನು ಜೈಲಿಗೆ ಕಳಿಸುವ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಎನ್.ವಿಷ್ಣುವರ್ಧನ್, ವಿಕ್ರಮ್ ಆಮ್ಟೆ ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: