ಮೈಸೂರು

ಜೆಸಿಇಯಲ್ಲಿ ಕಾರ್ಯಾಗಾರ

ಮೈಸೂರಿನ ಶ್ರೀಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಹಜರ್ಡಸ್ ಮೆಟಿರೀಯಲ್ ಮ್ಯಾನೇಜ್ ಮೆಂಟ್ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು ಗುರುವಾರ ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಾಗಾರವನ್ನು ಅಕ್ಟೋಬರ್ 25 ರಂದು ಬೆಳಿಗ್ಗೆ 9.30 ಕ್ಕೆ ಮುಂಬೈನ ಹೆಚ್ & ಎಸ್, ಎಸಿಸಿ ಲಿಮಿಟೆಡ್ ನ ನಿರ್ದೇಶಕ ಗಣೇಶ್ ಚಂದ್ರ ತ್ರಿಪಾಠಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಜಿ.ಎಂ. ಶಶಿಧರ್, ಜೆಎಸ್ಎಸ್ ನ ಉಪಕುಲಪತಿ ಡಾ. ಬಿ.ಜಿ. ಸಂಗಮೇಶ್ವರ, ಜೆಎಸ್ಎಸ್ ಕುಲಸಚಿವ ಡಾ. ಕೆ.ಎಸ್. ಲೋಕೇಶ್, ಡಾ. ರಾಂಪುರ ವಿಶ್ವನಾಥ, ಡಾ. ಜಯಪ್ರಕಾಶ್, ಡಾ. ಮನೋಜ್ ಉಪಸ್ಥಿತರಿದ್ದರು.

ಡಾ. ಪುಷ್ಪಾ ತುಪ್ದ ಅತಿಥಿಗಳನ್ನು ಪರಿಚಯಿಸಿದರು. ವಿವಿಧ ಉದ್ಯಗಳಿಂದ, ಸಂಸ್ಥೆಗಳಿಂದಲ್ಲದೇ ವಿದ್ಯಾರ್ಥಿಗಳು ಸೇರಿದಂತೆ 150 ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: