ದೇಶಪ್ರಮುಖ ಸುದ್ದಿ

ಲ್ಯಾಂಡ್ ಆಗುವ ವೇಳೆ ಮುಗ್ಗರಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್: ಪ್ರಯಾಣಿಕರು ಪಾರು

ಕೊಚ್ಚಿ, ಸೆ.5 : ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವೊಂದು ಇಂದು ಬೆಳಿಗ್ಗೆ  ಲ್ಯಾಂಡ್ ಆಗುವ ವೇಳೆ ಮುಗ್ಗರಿಸಿರುವ ಘಟನೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.  ಅದೃಷ್ಟವಶಾತ್ ಈ ಘಟನೆಯಲ್ಲಿ 102 ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಅಬುಧಾಬಿಯಿಂದ ಕೊಚ್ಚಿಗೆ ಬಂದಿಳಿಯುತ್ತಿದ್ದ ಬೋಯಿಂಗ್ 737-800 ವಿಮಾನ ಇಂದು ಮುಂಜಾನೆ 2.39 ರಲ್ಲಿ ಭೂಸ್ಪರ್ಶ ಮಾಡಿದ ನಂತರ  ಟ್ಯಾಕ್ಸ್‍ವೇನಿಂದ ನಿಲುಗಡೆ ಸ್ಥಳಕ್ಕೆ ಸಾಗುತ್ತಿದ್ದಾಗ 2.40 ರಲ್ಲಿ ಈ ಘಟನೆ ನಡೆದಿದೆ. ವಿಮಾನ ಮುಗ್ಗರಿಸಿದ ಪರಿಣಾಮವಾಗಿ ಅದರ ಮುಂದಿನ ಚಕ್ರಕ್ಕೆ ಹಾಲಿಯಾಗಿದೆ ಎಂದು ಏರ್ ಲೈನ್ ಮೂಲಗಳು ತಿಳಿಸಿವೆ. ಘಟನೆಯಿಂದ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲಾ  ಪ್ರಯಾಣಿಕರನ್ನು ಸುರಕ್ಷಿತವಾಗಿ ಏಣಿಗಳ ಮೂಲಕ  ಕೆಳಗಿಳಿಸಲಾಯಿತು ಎಂದು ಕೊಚ್ಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್(ಸಿಐಎಎಲ್) ವಕ್ತಾರರು ತಿಳಿಸಿದ್ದಾರೆ. ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ನಿಯಂತ್ರಣ ಮಂಡಳಿ ಡಿಜಿಸಿಎ ಆಂತರಿಕ ತನಿಖೆಗೆ ಆದೇಶಿಸಿದೆ.(ವರದಿ: ಎಲ್.ಜಿ)

 

 

 

 

 

 

Leave a Reply

comments

Related Articles

error: